ಬೆಂಗಳೂರು: ರಾಜ್ಯದಲ್ಲಿಂದು 1,857 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,24,732 ಕ್ಕೆ ಏರಿಕೆಯಾಗಿದೆ.
ಈ ದಿನ ಕೋವಿಡ್ಗೆ 30 ಜನ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 36,911ಕ್ಕೆ ಏರಿಕೆಯಾಗಿದೆ. ಇಂದು 1,950 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 28,65,067 ಮಂದಿ ಬಿಡುಗಡೆಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣ ಸಂಖ್ಯೆ 22,728ಕ್ಕೆ ಏರಿಕೆಯಾಗಿದೆ.