ಬೆಂಗಳೂರು:ರಾಜ್ಯದಲ್ಲಿ ಇಂದು 181 ಮಂದಿಗೆ ಸೋಂಕು ದೃಢಪಟ್ಟಿದೆ. 15,759 ಮಂದಿಗೆ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಸೋಂಕಿತರ ಸಂಖ್ಯೆ 39,48,464ಕ್ಕೆ ತಲುಪಿದೆ. ಪಾಸಿಟಿವ್ ದರವೂ ಶೇ 1.14ಕ್ಕೆ ಏರಿಕೆ ಆಗಿದೆ.
ಇತ್ತ 139 ಸೋಂಕಿತರು ಗುಣಮುಖರಾಗಿದ್ದು ಈ ತನಕ 39,06,466 ಮಂದಿ ಚೇತರಿಸಿಕೊಂಡಿದ್ದಾರೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 40,061ರಷ್ಟಿದ್ದು, ಸಾವಿನ ದರ ಶೇ. 0.44ರಷ್ಟಿದೆ. ಸದ್ಯ 1,895 ಸಕ್ರಿಯ ಪ್ರಕರಣಗಳು ಇವೆ. ವಿಮಾನ ನಿಲ್ದಾಣದಿಂದ 3,588 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 149 ಮಂದಿಗೆ ಸೋಂಕು ತಗುಲಿದ್ದು, 17,84,342ಕ್ಕೆ ಏರಿದೆ. 123 ಮಂದಿ ಗುಣಮುಖರಾಗಿದ್ದು, ಇದುವರೆಗೆ 17,65,590 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಸಾವಿನ ಸಂಖ್ಯೆ 16,962 ರಷ್ಟಿದ್ದು, 1,789 ಸಕ್ರಿಯ ಪ್ರಕರಣಗಳಿವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನೇಜ್ - 4,623
- ಇತರೆ - 331
- ಒಮಿಕ್ರಾನ್ - 5,422
- BAI.1.529 - 1,005
- BA 1- 100
- BA2 - 4,317
- ಒಟ್ಟು - 10,540
ಇದನ್ನೂ ಓದಿ:WHO ಕೋವಿಡ್ ಸಾವಿನ ವರದಿ; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಟೀಕಾಸ್ತ್ರ