ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹೊಸದಾಗಿ 1,806 ಮಂದಿಗೆ ಸೋಂಕು ದೃಢ, 42 ಮಂದಿ ಬಲಿ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿವೆ. ಇಂದು 1,806 ಮಂದಿಗೆ ಕೊರೊನಾ ದೃಢವಾಗಿದೆ.

Karnataka Covid
ಕರ್ನಾಟಕ ಕೊರೊನಾ

By

Published : Jul 16, 2021, 8:15 PM IST

ಬೆಂಗಳೂರು: ರಾಜ್ಯದಲ್ಲಿಂದು 1,52,908 ಜನರಿಗೆ ಕೊರೊನಾ‌ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 1,806 ಮಂದಿಗೆ ಸೋಂಕು ದೃಢಪಟ್ಟಿದೆ. 42 ಮಂದಿ ಇಂದು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 28,80,370ಕ್ಕೆ ಏರಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ.1.18ರಷ್ಟಿದೆ.

ಇಂದು 2,748 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಈವರೆಗೆ 28,12,869 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ 31,399 ಸಕ್ರಿಯ ಪ್ರಕರಣಗಳಿವೆ. ಇಂದು 42 ಮಂದಿ ಸಾವಿಗೀಡಾಗುವುದರ ಮೂಲಕ ಸಾವಿನ ಸಂಖ್ಯೆ 36,079ಕ್ಕೆ ಏರಿಕೆ ಕಂಡಿದೆ. ಜೊತೆಗೆ ಸಾವಿನ‌ ಶೇಕಡಾವಾರು ಪ್ರಮಾಣ 2.3 ರಷ್ಟಾಗಿದೆ.

ಇಂಗ್ಲೆಂಡ್​​ನಿಂದ ಬಂದವರಲ್ಲಿ ರೂಪಾಂತರಿ

ಯುಕೆಯಿಂದ 205 ಪ್ರಯಾಣಿಕರು ಇಂದು ರಾಜ್ಯಕ್ಕೆ ಆಗಮಿಸಿದ್ದು, ಯುಕೆಯ ರೂಪಾಂತರಿ ವೈರಸ್ ಅಲ್ಪಾ(Alpha/B.1.1.7) 159 ಜನರಲ್ಲಿ ಕಾಣಿಸಿಕೊಂಡಿದೆ. ಸೌತ್ ಆಫ್ರಿಕಾದ ಬೆಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ.

ಭಾರತದಲ್ಲಿ ಪತ್ತೆಯಾದ ರೂಪಾಂತರಿ (Delta/B.617.2) ಡೆಲ್ಟಾ 725 ಜನರಿಗೆ, ಕಪ್ಪಾ (Kappa/B.1.617) 185 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಡೆಲ್ಟಾ ಪ್ಲಸ್( Delta plus/ B.1.617.2.1(AY.1) ಈ ತನಕ ಮೂವರಲ್ಲಿ ಸೋಂಕು ಪತ್ತೆಯಾಗಿದೆ.

ಇದನ್ನೂ ಓದಿ:ಒಂದು ಕೋವಿಡ್ ಡೋಸ್​ನಿಂದ ಶೇ.82ರಷ್ಟು ಮರಣ ಪ್ರಮಾಣ ಇಳಿಕೆ

ABOUT THE AUTHOR

...view details