ಬೆಂಗಳೂರು: ಇಂದು 17ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಆರು ಕಂಟೈನರ್ನಲ್ಲಿ 112 ಟನ್ ಪ್ರಾಣವಾಯು ಬಂದು ತಲುಪಿದೆ.
ನಿನ್ನೆ ಮಧ್ಯಾಹ್ನ 16ನೇ ಟ್ರೈನ್ ಬಂದಿತ್ತು. 17ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ ಐಸಿಡಿ ವೈಟ್ ಫೀಲ್ಡ್ ತಲುಪಿದೆ. ಇದು 27ರಂದು ಸಂಜೆ 06:15ಕ್ಕೆ ಗುಜರಾತ್‌ನ ಕಾನಾಲಸ್‌ನಿಂದ ಲೋಡ್ ಆಗಿ ಪ್ರಯಾಣ ಬೆಳೆಸಿತ್ತು. ಈ ರೈಲು 6 ಕ್ರಯೋಜೆನಿಕ್ ಕಂಟೈನರ್‌ಗಳಿಂದ 111.98 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ.
6 ಕಂಟೈನರ್ಗಳಲ್ಲಿ ಬೆಂಗಳೂರು ತಲುಪಿತು 112 ಟನ್ ಪ್ರಾಣವಾಯು ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ಈಗ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರೆತೆ ಆಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ.
ಬೆಂಗಳೂರಿಗೆ ಆಗಮಿಸಿರುವ ವೈದ್ಯಕೀಯ ಆಮ್ಲಜನಕವನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ಈವರೆಗೆ ಕರ್ನಾಟಕವು ರೈಲ್ವೆ ಮೂಲಕ 2006.69 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ.
ಭಾರತೀಯ ರೈಲ್ವೆ ಇದುವರೆಗೆ 289 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಓಡಿಸಿದೆ ಮತ್ತು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು 1,162 ಟ್ಯಾಂಕರ್‌ಗಳಲ್ಲಿ 19,408 ಟನ್‌ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ.