ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೌದು, ಇಂದು ಕೂಡಾ ಹೊಸ 178 ಪಾಸಿಟಿವ್ ಕೇಸ್ ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 2,711ಏರಿಕೆಯಾಗಿದೆ.
ರಾಜ್ಯದ ಮೇಲೆ ಕೊರೊನಾ ಕೆಂಗಣ್ಣು: ಇಂದು 178 ಪಾಸಿಟಿವ್ ಕೇಸ್ ಪತ್ತೆ - ಕೊರೊನಾ ಸೋಂಕಿತರ ಸಂಖ್ಯೆ
ಮಹಾಮಾರಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಇದು ಜನರ ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಇಂದು ಹೊಸ 178 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 2,711ಏರಿಕೆಯಾಗಿದೆ.
ಹೊರ ರಾಜ್ಯ, ವಿದೇಶದಿಂದ ಬಂದು ಕ್ವಾರಂಟೈನ್ ಆದವರಲ್ಲೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈವರೆಗೆ ಆಸ್ಪತ್ರೆಯಿಂದ 869 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಉಳಿದ 1793 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಈವರೆಗೆ ಒಟ್ಟು 47 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ 10 ಪ್ರಕರಣಗಳು ಪತ್ತೆಯಾಗಿದ್ದು, ಎರಡು ಕೇಸ್ಗಳ ಸೋಂಕು ಹೇಗೆ ಹರಡಿತ್ತು ಎಂಬುದನ್ನ ಪತ್ತೆ ಹಚ್ಚಲಾಗುತ್ತಿದೆ. ಉಳಿದವು ನವದೆಹಲಿಯ ಪ್ರಯಾಣದ ಹಿನ್ನೆಲೆ ಹೊಂದಿವೆ. ಉಡುಪಿ-15, ರಾಯಚೂರು-62, ಕಲಬುರಗಿ-15, ಯಾದಗಿರಿ- 60, ಮೈಸೂರು-2, ಮಂಡ್ಯ-2, ಚಿತ್ರದುರ್ಗ-1, ದಾವಣಗೆರೆ- 4, ಬೆಂಗಳೂರು ಗ್ರಾಮಾಂತರ-1, ಚಿಕ್ಕಬಳ್ಳಾಪುರ-4, ಧಾರವಾಡ-1, ಶಿವಮೊಗ್ಗದಲ್ಲಿ-1 ಕೇಸ್ ಪತ್ತೆಯಾಗಿದೆ.