ಬೆಂಗಳೂರು:ನಗರದಲ್ಲಿ ಇತ್ತೀಚೆಗೆ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಬಿಬಿಎಂಪಿ ಕಟ್ಟಡಗಳ ಸರ್ವೇ ಕಾರ್ಯ ನಡೆಸಿದ್ದು, ಆಘಾತಕಾರಿ ಅಂಶವೊಂದು ಬಯಲಾಗಿದೆ. ನಗರದ ಒಟ್ಟು ಐದು ವಲಯಗಳಲ್ಲಿ 178 ಕಟ್ಟಡಗಳು ಕುಸಿಯುವ ಹಂತದಲ್ಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕುಸಿಯುವ ಹಂತದಲ್ಲಿ 178 ಕಟ್ಟಡಗಳು... ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ!
ಸಿಲಿಕಾನ್ ಸಿಟಿಯ ಒಟ್ಟು ಐದು ವಲಯಗಳಲ್ಲಿ 178 ಕಟ್ಟಡಗಳು ಕುಸಿಯುವ ಹಂತದಲ್ಲಿವೆ ಎಂಬುದು ಬಿಬಿಎಂಪಿಯ ಸರ್ವೇಯಿಂದ ತಿಳಿದುಬಂದಿದೆ.
ಅಲ್ಲದೆ, ಇದರಲ್ಲಿ ಈಗಾಗಲೇ 77 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಕಟ್ಟಡ ತೆರವು ಮಾಡಬೇಕು ಇಲ್ಲವೇ ಬಲಪಡಿಸಬೇಕೆಂದು ಆದೇಶಿಸಲಾಗಿದೆ. ಇನ್ನು, ನಿಯಮ ಮೀರಿ ಕಟ್ಟಡ ನಿರ್ಮಿಸುವ ಮಾಲೀಕರಿಗೆ ಇದರ ಗಂಭೀರತೆ ತಿಳಿಸಬೇಕಿದೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣ. ಇನ್ನು ಮುಂದೆ ಕುಸಿಯುವ ಹಂತದ ಕಟ್ಟಡ ಪರಿಶೀಲನೆಗೆ ಸ್ಟ್ರಕ್ಚರ್ ಆಡಿಟ್ ತಜ್ಞರನ್ನು ನೇಮಿಸಲಾಗುವುದು. ಇದಕ್ಕೆ ಆಗುವ ಖರ್ಚುವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಲಯವಾರು ಶಿಥಿಲ ಕಟ್ಟಡಗಳ ಸಂಖ್ಯೆ:
- ದಕ್ಷಿಣ- 33. 30
- ಪಶ್ಚಿಮ- 33. 06
- ಪೂರ್ವ- 49. 33
- ಯಲಹಂಕ- 61. 08
- ದಾಸರಹಳ್ಳಿ- 0. 0
- ಬೊಮ್ಮನಹಳ್ಳಿ- 0. 0
- ಆರ್ ಆರ್ ನಗರ- 0. 0
- ಒಟ್ಟು 178. 77