ಬೆಂಗಳೂರು:ಕೊರೊನಾ ಸೋಂಕು ನಗರದಲ್ಲಿ ಹರಡುತ್ತಿದ್ದು, ನಗರದಲ್ಲಿಂದು 17,597 ಜನರಲ್ಲಿ ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ 1835, ದಾಸರಹಳ್ಳಿಯಲ್ಲಿ 473, ಪೂರ್ವ ವಲಯದಲ್ಲಿ 2,073, ಮಹದೇವಪುರ 1,682, ಆರ್ ಆರ್ ನಗರ 1275, ದಕ್ಷಿಣ 3,190, ಪಶ್ಚಿಮ ವಲಯ 2,313, ಯಲಹಂಕ 1,139 ದೃಢಪಟ್ಟಿದೆ.
ಇದಲ್ಲದೇ ಬೆಂಗಳೂರು ಹೊರವಲಯದಕ್ಕಿ 1,646 ಪ್ರಕರಣ ಕಂಡುಬಂದಿದ್ದು, ದಕ್ಷಿಣ ತಾಲೂಕು 410, ಉತ್ತರ ತಾಲೂಕು 261, ಪೂರ್ವ ತಾಲೂಕು 160, ಆನೇಕಲ್ 510 ಜನರಿಗೆ ಸೋಂಕು ಹಬ್ಬಿದೆ.
ನಿನ್ನೆ ಒಂದೇ ದಿನ 124 ಮಂದಿ ಕೋವಿಡ್ಗೆ ಬಲಿಯಾಗಿದ್ದರು, 16,662 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624 ಕ್ಕೆ ಏರಿಕೆಯಾಗಿದೆ.