ಕರ್ನಾಟಕ

karnataka

ETV Bharat / state

1747 ಕೋಟಿ ರೂ. ಹೂಡಿಕೆಗೆ ಅನುಮೋದನೆ : 4904 ಉದ್ಯೋಗ ಸೃಷ್ಟಿ ಸಾಧ್ಯತೆ - ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ

ಒಟ್ಟು 35 ಬೃಹತ್ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಇದರಿಂದಾಗಿ 4904 ಉದ್ಯೋಗಗಳು ಸೃಷ್ಟಿಯಾಗಲಿವೆ. 50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ರೂ. 949,11 ಕೋಟಿ ಬಂಡವಾಳ ಹೂಡಿಕೆಯಾಗಿ ಸುಮಾರು 2461 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.

1747 ಕೋಟಿ ರೂ. ಹೂಡಿಕೆಗೆ ಅನುಮೋದನೆ : 4904 ಉದ್ಯೋಗ ಸೃಷ್ಟಿ ಸಾಧ್ಯತೆ
1747 Crore Rs Approval for investment 4904 job creation

By

Published : Oct 22, 2022, 11:42 AM IST

Updated : Oct 22, 2022, 11:55 AM IST

ಬೆಂಗಳೂರು: ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 1747.37 ಕೋಟಿ ರೂ. ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ ನೀಡಿದೆ. ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ 135 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಒಟ್ಟು 35 ಬೃಹತ್ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಇದರಿಂದಾಗಿ 4904 ಉದ್ಯೋಗಗಳು ಸೃಷ್ಟಿಯಾಗಲಿವೆ. 50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 949,11 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಸುಮಾರು 2461 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.

15 ಕೋಟೆ ರೂ. ನಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 25 ಹೊಸ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದ್ದು, ಇವುಗಳಿಂದ 567.43 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 2,443 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 230.83 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ.

ಮೇಲ್ಕಂಡ ಒಟ್ಟು 35 ಯೋಜನೆಗಳಿಂದ 1747.37 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 4,904 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.

ಪ್ರಸ್ತಾವಿತ ಯೋಜನೆಗಳು :ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್.


  1. ಹೂಡಿಕೆ 170 ಕೋಟಿ ರೂ., ಉದ್ಯೋಗ - 770.
    ಪ್ರಭಾರ್ಥಿ ಎಥ್ನಾಲ್ ಪ್ರೈ ಲಿಮಿಟೆಡ್
    ಹೂಡಿಕೆ - 150 ಕೋಟಿ, ಉದ್ಯೋಗ - 93.
  2. - ಶ್ರೀ ವೇದ್ ಪ್ರಕಾಶ್ ಡಿಸ್ಟಿಲರಿ ಪೆಟ್ರೋ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್
    ಹೂಡಿಕೆ - 149 ಕೋಟಿ ರೂ., ಉದ್ಯೋಗ -72.
  3. - ಅವಂಟಿನಿಯಾ ಆಗ್ರೋವೆಟ್ ಪ್ರೈ ಲಿಮಿಟೆಡ್.
    ಹೂಡಿಕೆ 138.36 ಕೋಟಿ ರೂ., ಉದ್ಯೋಗ- -65.
  4. - ಎಸ್.ಕೆ. ಸ್ಟೀಲ್ಟೆಕ್ ಪ್ರೈವೇಟ್ ಲಿಮಿಟೆಡ್.
    ಹೂಡಿಕೆ - 120 ಕೋಟಿ ರೂ., ಉದ್ಯೋಗ -190.
  5. - ಬೆಂಗಳೂರು ಮೆಟಲರ್ಜಿಕಲ್ಸ್ ಪ್ರೈವೇಟ್ ಲಿಮಿಟೆಡ್.
    ಹೂಡಿಕೆ - 100.29 ಕೋಟಿ ರೂ., ಉದ್ಯೋಗ -300 .
  6. - ಶ್ರೀ ಲಕ್ಷ್ಮಿ ಸ್ಟೀಲ್ ಸಪ್ಲೈಯರ್ಸ್.
    ಹೂಡಿಕೆ 64.28 ಕೋಟಿ ರೂ., ಉದ್ಯೋಗ - 250.
  7. - ಸೂರ್ಯ ಕೋಲ್ಡ್ ಸ್ಟೋರೇಜ್.
    ಹೂಡಿಕೆ ರೂ.56.38ಕೋಟಿ, ಉದ್ಯೋಗ -70.
  8. - ಗೋಪಾಲನ್ ಎಂಟರ್‌ಪ್ರೈಸಸ್ (ಲಾಜಿಸ್ಟಿಕ್ಸ್).
    ಹೂಡಿಕೆ 48.46 ಕೋಟಿ ರೂ, ಉದ್ಯೋಗ - 300.

ಇದನ್ನೂ ಓದಿ: ₹34 ಸಾವಿರ ಕೋಟಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ; 48 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ

Last Updated : Oct 22, 2022, 11:55 AM IST

ABOUT THE AUTHOR

...view details