ಕರ್ನಾಟಕ

karnataka

ETV Bharat / state

ಪಕ್ಷದಲ್ಲಿ ಏನೇ ಆದರೂ ನಮ್ಮ ಕುರ್ಚಿ ಭದ್ರವಾಗಿರಲಿ : ವಲಸೆ ನಾಯಕರಿಂದ ಅರುಣ್ ಸಿಂಗ್​ಗೆ ಮನವಿ - Arun Singh visit Bengaluru

ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಇವರ ಆಗಮನದ ಹಿನ್ನೆಲೆ ವಲಸೆ ಹಕ್ಕಿಗಳಲ್ಲಿ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಸಭೆಗೂ ಮುನ್ನ ಅವರೊಂದಿಗೆ ಗುಪ್ತ ಮಾತುಕತೆ ನಡೆಸಿ ಮನವಿ ಮಾಡಿಕೊಳ್ಳಲಿದ್ದಾರೆ..

ವಲಸೆ ನಾಯಕರು ಅರುಣ್ ಸಿಂಗ್​ಗೆ ಮನವಿ
ವಲಸೆ ನಾಯಕರು ಅರುಣ್ ಸಿಂಗ್​ಗೆ ಮನವಿ

By

Published : Jun 16, 2021, 6:32 PM IST

Updated : Jun 16, 2021, 7:49 PM IST

ಬೆಂಗಳೂರು :ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಗರಕ್ಕೆ ಭೇಟಿ ಹಿನ್ನಲೆ ನಾಯಕತ್ವದಲ್ಲಿ ಏನೇ ಬದಲಾವಣೆ ಆದರೂ 17 ವಲಸೆ ನಾಯಕರ ಸ್ಥಾನಕ್ಕೆ ಕುತ್ತು ಬೇಡ ಎಂದು ಮನವಿ ಮಾಡಲಿದ್ದಾರೆ ಎಂದು ಮೂಲಗಳು'ಈಟಿವಿ ಭಾರತ'ಕ್ಕೆ ತಿಳಿಸಿವೆ. ವಲಸೆ ನಾಯಕರು ಕುಮಾರ ಕೃಪ ಅತಿಥಿ ಗೃಹಕ್ಕೆ ಬರುವ ಮುನ್ನ ಕೃಷಿ ಸಚಿವ ಬಿ ಸಿ ಪಾಟೀಲ್ ನಿವಾಸದಲ್ಲಿ ಚರ್ಚೆ ನಡೆಸಿದರು.

ನಂತರ ಕೆಕೆ ಗೆಸ್ಟ್ ಹೌಸ್​ಗೆ ಬೇಗನೆ ಆಗಮಿಸಿ ಅರುಣ್ ಸಿಂಗ್ ಜತೆ ಪ್ರತ್ಯೇಕ ಚರ್ಚೆ ಮಾಡಲು ನಿರ್ಧರಿಸಿದ್ದರು. ಆದರೆ, ಕೆಲವೇ ನಿಮಿಷಗಳ ಕಾಲ ಮಾತ್ರ ಅರುಣ್ ಸಿಂಗ್ ಇದ್ದ ಕಾರಣ, ಬಿಜೆಪಿ ಕಚೇರಿಯಲ್ಲಿ ನಡೆಯುವ ಸಭೆ ನಂತರ ಮನವಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್​​ಗೆ ಅರುಣ್ ಸಿಂಗ್ ಆಗಮನ

ಅಷ್ಟೇ ಅಲ್ಲ, ಅರುಣ್ ಸಿಂಗ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಮಾತುಕತೆ ನಡೆಸಲಿದ್ದಾರೆ. ಸಿಡಿ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಮತ್ತೆ ಸಂಪುಟಕ್ಕೆ ಸೇರಿಸುವಂತೆ ಮನವಿಯನ್ನ ಜಾರಕಿಹೊಳಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Last Updated : Jun 16, 2021, 7:49 PM IST

ABOUT THE AUTHOR

...view details