ಕರ್ನಾಟಕ

karnataka

ETV Bharat / state

ಚಾಕು ತೋರಿಸಿ ಸುಲಿಗೆ: ಬೆಂಗಳೂರಿನಲ್ಲಿ ಮೂವರು ಆರೋಪಿಗಳ ಬಂಧನ - bengaluru latest crime news

ವಾಕಿಂಗ್ ಹೋಗುವ ಜನರಿಗೆ ಚಾಕು ತೋರಿಸಿ ಹೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು ಅಪಾರ ಪ್ರಮಾಣದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

17 lakh worth gold seized from three accused
ಆರೋಪಿಗಳ ಬಂಧನ

By

Published : Sep 9, 2021, 3:14 PM IST

ಬೆಂಗಳೂರು:ಜನರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

17 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಪರಮೇಶ್ವರಯ್ಯ, ಜಗದೀಶ್, ಶಶಿಕುಮಾರ್ ಬಂಧಿತರು. ಈ ಆರೋಪಿಗಳು ಬೆಳಗ್ಗೆ ಅಥವಾ ಸಂಜೆಯ ಹೊತ್ತಲ್ಲಿ ವಾಕಿಂಗ್ ಮಾಡುತ್ತಿದ್ದ ಜನರಿಗೆ ಚಾಕು ತೋರಿಸಿ ಸರ ಕಿತ್ತುಕೊಳ್ತಿದ್ದರು. ಸದ್ಯ ಇವರಿಂದ 17 ಲಕ್ಷ ರೂ ಮೌಲ್ಯದ 247 ಗ್ರಾಂ ಚಿನ್ನಾಭರಣ, ಒಂದು ಚಾಕು ಮತ್ತು ಒಂದು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಮೆಜಾನ್ ಉದ್ಯೋಗಿಗಳೆಂದು ಜನರನ್ನು ವಂಚಿಸುತ್ತಿದ್ದ 22 ಮಂದಿ ಬಂಧನ

ABOUT THE AUTHOR

...view details