ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1632 ಮಂದಿಗೆ ಕೋವಿಡ್ ಸೋಂಕು ದೃಢ ; 25 ಸೋಂಕಿತರು ಬಲಿ

ಸಕ್ರಿಯ ಪ್ರಕರಣಗಳು 22,698 ರಷ್ಟಿವೆ. ಶನಿವಾರ 25 ಸೋಂಕಿತರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 36,958ಕ್ಕೆ ಏರಿದೆ. ಸಾವಿನ ಪ್ರಮಾಣ 1.53% ರಷ್ಟಿದೆ. ವಿಮಾನ ನಿಲ್ದಾಣದಿಂದ 976 ಜನರು ಆಗಮಿಸಿದ್ದು, ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ.‌ ಯುಕೆಯಿಂದ 103 ಪ್ರಯಾಣಿಕರು ಆಗಮಿಸಿದ್ದಾರೆ..

1632 new corona cases found in karnataka
25 ಸೋಂಕಿತರು ಬಲಿ

By

Published : Aug 14, 2021, 8:10 PM IST

ಬೆಂಗಳೂರು :ರಾಜ್ಯದಲ್ಲಿಂದು 1,55,989 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1632 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಒಟ್ಟು 25 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ 29,28,033ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಪಾಸಿಟಿವಿಟಿ ದರ 1.04%ರಷ್ಟಿದೆ. ಇನ್ನು, 1612 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 28,68,351ಜನರು ಡಿಸ್ಜಾರ್ಜ್ ಆಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳು 22,698 ರಷ್ಟಿವೆ. ಶನಿವಾರ 25 ಸೋಂಕಿತರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 36,958ಕ್ಕೆ ಏರಿದೆ. ಸಾವಿನ ಪ್ರಮಾಣ 1.53% ರಷ್ಟಿದೆ. ವಿಮಾನ ನಿಲ್ದಾಣದಿಂದ 976 ಜನರು ಆಗಮಿಸಿದ್ದು, ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ.‌ ಯುಕೆಯಿಂದ 103 ಪ್ರಯಾಣಿಕರು ಆಗಮಿಸಿದ್ದಾರೆ.

ರೂಪಾಂತರಿ ಮಾಹಿತಿ :

1) ಡೆಲ್ಟಾ ( Delta/B.617.2) -1089

2) ಅಲ್ಪಾ(Alpha/B.1.1.7) - 155

3) ಕಪ್ಪಾ (Kappa/B.1.617)- 159

4) ಬೇಟಾ ವೈರಸ್ (BETA/B.1.351) -7

5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4

6) ಈಟಾ (ETA/B.1.525) - 1

ABOUT THE AUTHOR

...view details