ಬೆಂಗಳೂರು: ರಾಜ್ಯದಲ್ಲಿ 15,654 ಜನರನ್ನು ಸಮೀಕ್ಷೆ ಮಾಡಲಾಗಿದೆ. ಈಗಾಗಲೇ ಕೋವಿಡ್ ಬಂದು ಗುಣಮುಖರಾಗಿರುವವರ ಸರಾಸರಿ ಶೇ. 16.4ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಂಬೈ, ಪುಣೆ ಮತ್ತು ತಮಿಳುನಾಡಿನಲ್ಲಿ ಹೆಚ್ಚಿದೆ. ಸಕ್ರಿಯ ಸೋಂಕಿತರ ಪ್ರಮಾಣ ಶೇ. 12.7ರಷ್ಟಿದೆ. ಎರಡೂ ಸೇರಿ ಶೇ. 27.3ರಷ್ಟಿದೆ. ಮರಣ ಪ್ರಮಾಣ ಶೇ. 0.05 ಮಾತ್ರ ಇದೆ. ಮುಂಬೈ 0.10 ಇದೆ. ದೆಹಲಿ 0.09 ಇದೆ ಎಂದು ಹೇಳಿದರು.
ರಾಜ್ಯದ 30 ಜಿಲ್ಲೆಗಳಲ್ಲಿ ಸಿರೋ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿಯೂ ಇದೇ ರೀತಿ ಸರ್ವೆ ಮಾಡಲಾಗಿತ್ತು. ಆದರೆ ಅಲ್ಲಿ ಕೇವಲ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸರ್ವೆ ಮಾಡಲಾಗಿತ್ತು. ಆದರೆ ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗಿದೆ. ಮಾಡರೇಟ್ ರಿಸ್ಕ್ ಮತ್ತು ಹೈ ರಿಸ್ಕ್ ಇರುವ ಎರಡೂ ವಿಭಾಗಗಳ ಸೋಂಕಿತರ ಸರ್ವೆ ಮಾಡಲಾಗಿದೆ ಎಂದು ಹೇಳಿದರು.