ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಕಂಡು ಕೇಳರಿಯದ ದರೋಡೆ: 77 ಕೆಜಿ ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರಿನ ಪುಲಕೇಶಿ ನಗರದ ಮುತ್ತೂಟ್​ ಫೈನಾನ್ಸ್​ನಲ್ಲಿ 16 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಕಚೇರಿಯ ಭದ್ರತೆ ಕೊರತೆಯಿಂದ ಈ ಕೃತ್ಯ ನಡೆದಿದೆ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಹೇಳಿದ್ದಾರೆ.

muthoot finance office
ಮುತ್ತೂಟ್​ ಫೈನಾನ್ಸ್

By

Published : Dec 24, 2019, 7:44 PM IST

Updated : Dec 24, 2019, 8:24 PM IST

ಬೆಂಗಳೂರು:ಮುತ್ತೂಟ್​ ಫೈನಾನ್ಸ್​ನ ಕಚೇರಿಯ ಬಾತ್ ರೂಮ್​ ಗೋಡೆ ಕೊರೆದು ಅಂದಾಜು 77 ಕೆ.ಜಿ ಚಿನ್ನಾಭರಣ, ಮೌಲ್ಯಯುತ ವಸ್ತುಗಳ ದರೋಡೆ ನಡೆದಿದೆ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಹೇಳಿದರು.​

ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​

ಬೆಂಗಳೂರಿನ ಪುಲಿಕೇಶಿನಗರ ಠಾಣಾ ವ್ಯಾಪ್ತಿಯ ಫೈನಾನ್ಸ್ ಕಂಪನಿಯೊಂದರಲ್ಲಿ ನಿನ್ನೆ (ಡಿ.23) ತಡರಾತ್ರಿ 10 ಜನರ ತಂಡ ಕೈಚಳಕ ತೋರಿಸಿದೆ ಎನ್ನಲಾಗುತ್ತಿದೆ. ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನ ಮೂಡಿದ್ದು ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

ಆರೋಪಿಗಳು ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ, ಸಿಸಿಬಿ ಡಿಸಿಪಿ ಕುಲ್​ದೀಪ್ ಜೈನ್ ಭೇಟಿ ನೀಡಿದ್ದಾರೆ.

ಫೈನಾನ್ಸ್ ನಿರ್ಲಕ್ಷ್ಯವೇ ಘಟನೆಗೆ ಮುಖ್ಯ ಕಾರಣ. ರಾತ್ರಿ ಭದ್ರತಾ ಸಿಬ್ಬಂದಿ ಇರಲಿಲ್ಲ ಹಾಗೂ ಸಿಸಿ ಟಿವಿ ಕ್ಯಾಮೆರಾಗಳು ಸಕ್ರಿಯವಾಗಿರಲಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

Last Updated : Dec 24, 2019, 8:24 PM IST

ABOUT THE AUTHOR

...view details