ಬೆಂಗಳೂರು :ರಾಜ್ಯದಲ್ಲಿ ಕೋವಿಡ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆ ಕಂಡಿದೆ. ಇಂದು ಒಂದೇ ದಿನ 146 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 13,497ಕ್ಕೆ ಏರಿಕೆ ಆಗಿದ್ದು, ಶೇಕಡವಾರು ಪ್ರಮಾಣ 0.92ರಷ್ಟಿದೆ.
ಸೋಂಕಿತರ ಸಂಖ್ಯೆ ಸಹ ರಾಕೆಟ್ ವೇಗದಲ್ಲಿದೆ. ಇಂದು 15,785 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,76,850ಕ್ಕೇರಿದೆ. ಇತ್ತ 7098 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 10,21,250 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
1,42,084ಕ್ಕೆ ಸಕ್ರಿಯ ಪ್ರಕರಣಗಳು ಏರಿಕೆ ಕಂಡಿವೆ. 721 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 12.81ರಷ್ಟಿದೆ. ಈ ಮಧ್ಯೆ ಯುಕೆಯಿಂದ 328 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೊಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 97 ಜನ ಬಲಿ :ನಗರದಲ್ಲಿಂದು ಅತಿ ಹೆಚ್ಚು ಅಂದ್ರೆ 97 ಮಂದಿ ಮೃತಪಟ್ಟಿದ್ದಾರೆ. ಇಂದು 9618 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,03,178ಕ್ಕೆ ಏರಿಕೆಯಾಗಿದೆ. ಇಂದು 4240 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 556253ಕ್ಕೆ ಏರಿಕೆಯಾಗಿವೆ. ಸಾವಿನ ಸಂಖ್ಯೆ 5220 ಆಗಿದೆ.