ಬೆಂಗಳೂರು: ರಾಜ್ಯದಲ್ಲಿಂದು 1522 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,82,608ಕ್ಕೆ ಏರಿಕೆ ಆಗಿದೆ.
ಕೊರೊನಾಗೆ 12 ಸೋಂಕಿತರು ಮೃತರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,750ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 1.37ರಷ್ಟು ಹಾಗೂ ಸಾವಿನ ಪ್ರಮಾಣ ಶೇ 0.78 ರಷ್ಟು ಇದೆ.
ಇದನ್ನೂ ಓದಿ:ಪತ್ನಿಯ ವಿವಾಹೇತರ ಸಂಬಂಧದ ವ್ಯಾಮೋಹ: ಗಂಡನ ತಲೆಗೆ ಫಿಕ್ಸ್ ಮಾಡಿದ್ಲು 10 ಲಕ್ಷ ಸುಪಾರಿ... ಮುಂದೆ?
ಕೊರೊನಾದಿಂದ 2133 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,46,082 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 384 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದು, ರಾಜ್ಯದಲ್ಲಿ ಸದ್ಯ 24,757 ಸಕ್ರಿಯ ಪ್ರಕರಣಗಳು ಇವೆ. ಕಳೆದ 7 ದಿನಗಳಲ್ಲಿ 31,565 ಜನರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಇನ್ನು ಸೋಂಕಿತರ ಸಂಪರ್ಕದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿ 1,20,409 ಮತ್ತು ದ್ವಿತೀಯ ಸಂಪರ್ಕದಲ್ಲಿ 1,34,409 ಜನರು ಇದ್ದಾರೆಂದು ವೈದ್ಯಕೀಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.