ಬೆಂಗಳೂರ : ಪ್ರತಿಷ್ಠಿತ ಅಜೀಂ ಪ್ರೇಮ್ಜಿ ಫೌಂಡೇಶನ್ ಸಂಸ್ಥೆ ಹೆಸರಲ್ಲಿ ದೋಖಾ ನಡೆದದ್ದು, ತಾನು ಅಜೀಂ ಪ್ರೇಮ್ಜಿ ಒಡೆತನದ ಕಂಪನಿಯವನು ಎಂದು ಹೇಳಿ ಸುಮಾರು 15 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ರಿಜ್ವಿ ಎಂಬ ವ್ಯಕ್ತಿಯೇ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಆರೋಪಿ. ಕಂಪನಿಯಿಂದ ಟ್ರಸ್ಟ್ವೊಂದಕ್ಕೆ ಧನ ಸಹಾಯ ಮಾಡುವ ಸಲುವಾಗಿ ಆರು ತಿಂಗಳಿಗೆ 66 ಲಕ್ಷ ಧನ ಸಹಾಯ ಮಾಡುವ ಬಗ್ಗೆ ಈ-ಮೇಲ್ ಸಂವಾದ ನಡೆದಿತ್ತು. ಇದನ್ನೇ ಬಳಸಿಕೊಂಡು ರಿಜ್ವಿ ಎಂಬ ವ್ಯಕ್ತಿ ಸಂಸ್ಥೆಯ ಹೆಸರು ಹೇಳಿಕೊಂಡು ತಾನು ಇಲ್ಲಿಯೇ ಕೆಲಸ ನಿರ್ವಹಿಸುವವನು ಎಂದು ಬಿಂಬಿಸಿ ನಕಲಿ ಈ-ಮೇಲ್ ಐಡಿ ಕ್ರಿಯೇಟ್ ಮಾಡಿದ್ದಾನೆ.