ರಾಜ್ಯದಲ್ಲಿಂದು 1453 ಮಂದಿಗೆ ಕೋವಿಡ್ ಸೋಂಕು : 17 ಜನ ಸಾವು - ಕರ್ನಾಟಕ ಕೋವಿಡ್ ಪ್ರಮಾಣ
ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ವರದಿಯನ್ನು ಬಿಡುಗಡೆ ಮಾಡಿದ್ದು, ಇಂದು 1453 ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಇಳಿಕೆಯತ್ತ ಮುಖ ಮಾಡುತ್ತಿದ್ದು, ಡಿಸ್ಜಾರ್ಜ್ ಸಂಖ್ಯೆಯು ಹೊಸ ಪ್ರಕರಣಕ್ಕಿಂತ ಹೆಚ್ಚಿದೆ..
ಕೊರೊನಾ ವರದಿ
By
Published : Aug 20, 2021, 7:15 PM IST
ಬೆಂಗಳೂರು :ರಾಜ್ಯದಲ್ಲಿಂದು 1,73,000 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1453 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 29,36,077ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಪಾಸಿಟಿವಿಟಿ ದರ 0.83% ರಷ್ಟಿದೆ.
ಇನ್ನು,1408 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,77,785 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 21,161ರಷ್ಟು ಇವೆ. 17 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,105ಕ್ಕೆ ಏರಿದೆ. ಕೋವಿಡ್ ಡೇತ್ ರೇಟ್ 1.16% ರಷ್ಟಿದೆ.
ಹೊಸ ಪ್ರಕರಣಗಳ ಇಳಿಕೆ : ಏರಿಕೆಯತ್ತ ಗುಣಮುಖ ಪ್ರಕರಣಗಳು
ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಇಳಿಕೆಯತ್ತ ಮುಖ ಮಾಡುತ್ತಿದ್ದು, ಡಿಸ್ಜಾರ್ಜ್ ಸಂಖ್ಯೆಯು ಹೊಸ ಪ್ರಕರಣಕ್ಕಿಂತ ಹೆಚ್ಚಿದೆ.