ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1,445 ಮಂದಿಗೆ ಸೋಂಕು ದೃಢ: ನಾಲ್ಕು ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ ಕಡ್ಡಾಯ

ರಾಜ್ಯದಲ್ಲಿಂದು1,445 ಮಂದಿಗೆ ಕೊರೊನಾ ವಕ್ಕರಿಸಿದೆ. ಕೇರಳ, ಮಹಾರಾಷ್ಟ್ರ ಹಾಗೂ ಪಂಜಾಬ್, ಛತ್ತೀಸ್​ಗಢದಲ್ಲಿ ಇತ್ತೀಚೆಗೆ ಸೋಂಕಿತರ ಪ್ರಮಾಣ ಏರಿಕೆ ಆಗಿದ್ದು, ಹೀಗಾಗಿ ಆ ರಾಜ್ಯದಿಂದ ಬರುವ ಎಲ್ಲ ಪ್ರಯಾಣಿಕರಿಗೆ ಆರ್​​​ಟಿ-ಪಿಸಿಆರ್ ಕಡ್ಡಾಯ ಮಾಡಲಾಗಿದೆ.

Corona
ಕೊರೊನಾ

By

Published : Mar 22, 2021, 7:58 PM IST

ಬೆಂಗಳೂರು:ರಾಜ್ಯದಲ್ಲಿಂದು 1,445 ಜನರಿಗೆ ಸೋಂಕು ದೃಢಪಟ್ಟಿದ್ದು,ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 9,71,647ಕ್ಕೆ ಏರಿಕೆ ಆಗಿದೆ. 10 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆಯು 12,444ಕ್ಕೆ ಏರಿದೆ.‌ 661 ಮಂದಿ ಗುಣಮುಖರಾಗಿದ್ದು 9,44,917ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 14,267 ಇದ್ದು, 136 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತರ ಪ್ರಕರಣಗಳ ಶೇಕಡವಾರು 1.84% ರಷ್ಟು ಇದ್ದರೆ ಮೃತರ ಪ್ರಮಾಣ ಶೇ. 0.69% ರಷ್ಟು ಇದೆ.

ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್​ಗಢದಿಂದ ಬರುವ ಪ್ರಯಾಣಿಕರಿಗೆ ಆರ್​​​ಟಿ-ಪಿಸಿಆರ್ ಕಡ್ಡಾಯ

ಕೇರಳ, ಮಹಾರಾಷ್ಟ್ರ ಹಾಗೂ ಪಂಜಾಬ್, ಛತ್ತೀಸ್​ಗಢದಲ್ಲಿ ಇತ್ತೀಚೆಗೆ ಸೋಂಕಿತರ ಪ್ರಮಾಣ ಏರಿಕೆ ಆಗಿದ್ದು, ಹೀಗಾಗಿ ಆ ರಾಜ್ಯದಿಂದ ಬರುವ ಎಲ್ಲ ಪ್ರಯಾಣಿಕರು 72 ಗಂಟೆಗಳ ಮೊದಲಿನ ರಿಪೋರ್ಟ್ ಇರಬೇಕು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ವಿಮಾನ, ರೈಲು ನಿಲ್ದಾಣ, ಬಸ್ಸು ಸೇರಿದಂತೆ ಇತರೆ ವಾಹನಗಳ ಮೂಲಕ ಪ್ರಯಾಣಿಸುವವರಿಗೆ ವರದಿ ಕಡ್ಡಾಯ ಮಾಡಲಾಗಿದೆ.

ರೈಲಿನಲ್ಲಿ ಬರುವ ಪ್ರಯಾಣಿಕರ ಕೋವಿಡ್​ ರಿಪೋರ್ಟ್ ಅನ್ನ ತಪಾಸಣೆ ಮಾಡುವ ಜವಾಬ್ದಾರಿಯನ್ನ ಇಲಾಖೆಯೇ ಹೊರಬೇಕಿದೆ.‌ ಬಸ್ಸುಗಳಲ್ಲಿ ಬರುವ ಪ್ರಯಾಣಿಕರ ಕೋವಿಡ್ ರಿಪೋರ್ಟ್ ಕಂಡಕ್ಟರ್ ಪರಿಶೀಲನೆ ಮಾಡಿ, ನಂತರ ಅವಕಾಶ ನೀಡಬೇಕು.

ತುರ್ತುಸ್ಥಿತಿಯ ಸಂದರ್ಭಕ್ಕೆ ವಿನಾಯಿತಿ ಕೊಟ್ಟಿದ್ದು ರಾಜ್ಯಕ್ಕೆ ಆಗಮಿಸಿದ ಕೂಡಲೇ ಸ್ವಾಬ್ ಪಡೆಯಲಾಗುತ್ತೆ, ಜೊತೆಗೆ ಮನೆ ವಿಳಾಸ,ಐಡಿ ಕಾರ್ಡ್, ಫೋನ್ ನಂಬರ್ ಮಾಹಿತಿ ಪಡೆಯಲಾಗುತ್ತೆ.‌ ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ. ‌2 ವರ್ಷದೊಳಗಿನ ಮಕ್ಕಳಿಗೆ ಹಾಗೂ ಸಂವಿಧಾನಿಕ ಹುದ್ದೆ, ಆರೋಗ್ಯ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ.

ABOUT THE AUTHOR

...view details