ಬೆಂಗಳೂರು:ನಿಷೇಧಾಜ್ಞೆ ಜಾರಿ ಹಿನ್ನೆಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಟೌನ್ಹಾಲ್ ಬಳಿ ಇಂದು ಇಬ್ಬರು ಮಹಿಳೆಯರು ವಿನೂತನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. 144 ಸೆಕ್ಷನ್ ಜಾರಿ ಹಿನ್ನೆಲೆ 4ಕ್ಕಿಂತ ಹೆಚ್ಚು ಜನರು ಗುಂಪಾಗಿ ಹೋಗಲು ನಿಷೇಧ ವಿಧಿಸಲಾಗಿತ್ತು.
ಬೆಂಗಳೂರಲ್ಲಿ 144 ಸೆಕ್ಷನ್ ಮುಂದುವರಿಕೆ... ಇಬ್ಬರೇ ಇರೋದು, ಬಂಧಿಸುವಂತಿಲ್ಲ ಎಂದ ಮಹಿಳೆಯರು! - ಬೆಂಗಳೂರಿನಲ್ಲಿ ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆ
ಬೆಂಗಳೂರಿನ ಟೌನ್ಹಾಲ್, ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನವಾಗಿ ಮಹಿಳೆಯರಿಬ್ಬರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು. ಈ ರೀತಿಯಾಗಿ ಹಲವು ಕಡೆ ಪ್ರತಿರೋಧ ವ್ಯಕ್ತವಾಗಿದೆ.
ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆ ಪ್ರತಿಭಟನಕಾರರು ತಮ್ಮ ವಿರೋಧವನ್ನು ಈ ರೀತಿ ಹೊರಹಾಕಿದ್ದಾರೆ.ಇಲ್ಲಿನ ಟೌನ್ಹಾಲ್, ಮೈಸೂರು ವೃತ್ತದಿಂದ ಇತರೆಡೆ ಇಬ್ಬರಿಂದ ಮೂರು ಜನರು ಸೇರಿ ಪ್ರತ್ಯೇಕವಾಗಿ ನೂರಾರು ಪ್ರತಿಭಟನಕಾರರು ಪೌರತ್ವ ಮಸೂದೆ ವಿರುದ್ಧ ಈ ರೀತಿಯ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪೊಲೀಸರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ನೊಂದೆಡೆ ಸಾವಿರಾರು ಜನರು ಬೇರೆ ಬೇರೆಯಾಗಿ ಸೇರಿ ಪೊಲೀಸರು ಏನೂ ಮಾಡಲಾಗದಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ರೀತಿಯ ಪ್ರತಿಭಟನೆಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.