ಬೆಂಗಳೂರು: ಕೋವಿಡ್ ಮಹಾಮಾರಿಯ ಸೋಂಕು ನಿನ್ನೆ ಮತ್ತಷ್ಟು ಮಂದಿಗೆ ಹರಡಿದ್ದು, ಇಂದು ಅತಿಹೆಚ್ಚು ಜನರ ರಿಪೋರ್ಟ್ ಬರುವ ಸಾಧ್ಯತೆ ಇದೆ. ನಿನ್ನೆ ಬೆಳಗ್ಗಿನಿಂದ ರಾತ್ರಿ 12 ರವರೆಗೆ 1407 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಗರದಲ್ಲಿಂದು 1407 ಕೋವಿಡ್ ಪಾಸಿಟಿವ್ ಪ್ರಕರಣ: ಬಿಬಿಎಂಪಿ ಶಾಲಾ ಮಕ್ಕಳು ಸದ್ಯಕ್ಕೆ ಬಚಾವ್
ವಿದ್ಯಾರ್ಥಿಗಳು, ಶಿಕ್ಷಕರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ. ಒಟ್ಟು 19 ಪ್ರೌಢಶಾಲೆಯ 5,835 ವಿದ್ಯಾರ್ಥಿಗಳಿದ್ದು, ಇದರಲ್ಲಿ 1,665 ಮಂದಿಯ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಶಾಲಾ ಮಕ್ಕಳು ಸದ್ಯಕ್ಕೆ ಬಚಾವ್
ಇನ್ನೊಂದೆಡೆ ಬಿಬಿಎಂಪಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಎರಡು ದಿನದಿಂದ ವಿದ್ಯಾರ್ಥಿಗಳು, ಶಿಕ್ಷಕರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ. ಒಟ್ಟು 19 ಪ್ರೌಢಶಾಲೆಯ 5835 ವಿದ್ಯಾರ್ಥಿಗಳಿದ್ದು, ಇದರಲ್ಲಿ 1665 ಮಂದಿಯ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬ್ರೆಜಿಲ್ನಲ್ಲಿ ಒಂದೇ ದಿನಕ್ಕೆ 3000 ಜನ ಕೋವಿಡ್ಗೆ ಬಲಿ.. ಇದು ವಿಶ್ವಕ್ಕೆ ಎಚ್ಚರಿಕೆಯ ಗಂಟೆ!