ಬೆಂಗಳೂರು:ಆರ್. ವಿ. ರಸ್ತೆ ಮೆಟ್ರೋ ದಿಂದ ಯಲಚೇನಹಳ್ಳಿ ಮೆಟ್ರೋ ಸಂಚಾರವೂ, ನವೆಂಬರ್ 14 ರಿಂದ 17 ರ ವರೆಗೆ ಸ್ಥಗಿತವಾಗಲಿದೆ. ನ. 14 ರಂದು ಬೆಳಗ್ಗೆ 5 ಗಂಟೆಯಿಂದ 17 ರ ರಾತ್ರಿ 11 ಗಂಟೆಯವರೆಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಮಾರ್ಗದಲ್ಲಿ ನ.14 -17ರವರೆಗೆ ಮೆಟ್ರೋ ಸಂಚಾರ ಸ್ಥಗಿತ - ಇಂಟರ್ ಚೇಂಜ್ ನಿಲ್ದಾಣ
ಆರ್ ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗುತ್ತಿರುವ ಹಿನ್ನೆಲೆ, ಆ ಮಾರ್ಗದಲ್ಲಿ ನವೆಂಬರ್ 14 ರಿಂದ 17 ರವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.
ಆರ್ ವಿ ರಸ್ತೆ -ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಆರ್ ವಿ ರಸ್ತೆಯಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗಿತ್ತಿದೆ. ಹೀಗಾಗಿ ಸೇವೆ ಇರೋದಿಲ್ಲ. ಇನ್ನು ಉಳಿದಂತೆ ಜಯನಗರದಿಂದ ನಾಗಸಂದ್ರ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಇತ್ತ ಮೆಟ್ರೋ ಸಂಚಾರ ಸ್ಥಗಿತ ಹಿನ್ನಲೆ, ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಬಿಎಂಟಿಸಿ ಬಸ್ ಸೌಲಭ್ಯವನ್ನು ನಮ್ಮ ಮೆಟ್ರೋ ಒದಗಿಸಿದೆ. ಬೆಳಗ್ಗೆ 5 ರಿಂದ ರಾತ್ರಿ 11:30 ರವರೆಗೂ ಆರ್ವಿ ರಸ್ತೆಯಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಮಧ್ಯೆ ಬಿಎಂಟಿಸಿ ಬಸ್ಗಳು ಸಂಚರಿಸಲಿವೆ.