ಕರ್ನಾಟಕ

karnataka

ETV Bharat / state

ಸಮಾಜದ್ರೋಹಿ ಚಟುವಟಿಕೆಯಲ್ಲಿ ಭಾಗಿ ಶಂಕೆ: ಬಂಧಿತ 14 ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಲಿರುವ ಪೊಲೀಸರು - ಈಟಿವಿ ಭಾರತ್​ ಕನ್ನಡ

ನಿನ್ನೆ ಬೆಂಗಳೂರಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ವಿದೇಶಗಳಿಂದ ಹಣ ಸಂಗ್ರಹ ಹಾಗೂ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆಯಡಿ ಎನ್​​ಐಎ ದಾಳಿ ನಡೆಸಿ 19 ಜನರನ್ನು ಬಂಧಿಸಿದೆ.

14-people-suspected-to-be-involved-
ಸಮಾಜದ್ರೋಹಿ ಚಟುವಟಿಕೆ ಕೃತ್ಯ ಭಾಗಿ ಶಂಕೆ

By

Published : Sep 23, 2022, 5:31 PM IST

ಬೆಂಗಳೂರು: ಭಯೋತ್ಪಾದನಾ ಚಟುವಟಿಕೆಗಳಿಗೆ ವಿದೇಶಗಳಿಂದ ಹಣ ಸಂಗ್ರಹ ಹಾಗೂ ಸಮಾಜವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಆರೋಪದಡಿ ನಗರ ಪೊಲೀಸರು ನಿನ್ನೆ ರಾಜ್ಯದ 9 ಜಿಲ್ಲೆಗಳಲ್ಲಿ ದಾಳಿ ನಡೆಸಿ 14 ಮಂದಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಹಾಜರುಪಡಿಸಲು ಮುಂದಾಗಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದಡಿ ಸ.21ರಂದು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಜ್ಯದ ಒಟ್ಟು 19 ಮಂದಿ ವಿರುದ್ಧ ಪ್ರಕರಣ ದಾಖಲಿಸಿ. ನಿನ್ನೆ ಬೆಳಗ್ಗೆ ಏಕಕಾಲದಲ್ಲಿ ದಾಳಿ‌ ನಡೆಸಿ 14 ಮಂದಿ ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದರು.

ಭಯೋತ್ಪಾದಕ ಚಟುವಟಿಕೆಗೆ ವಿದೇಶದಿಂದ ಹಣ ಸಂಗ್ರಹ, ಯುವಕರನ್ನ ಮೂಲಭೂತವಾದಿಯನ್ನಾಗಿ ಮಾಡಲು ತರಬೇತಿ, ವಿಧ್ವಸಂಕ ಕೃತ್ಯಗಳಿಗೆ ಸಂಚು ಆರೋಪ ಕುರಿತಂತೆ ದೂರು ದಾಖಲಾಗಿತ್ತು. ಸದ್ಯ ಪುಲಿಕೇಶಿನಗರ ಪೊಲೀಸ್ ಠಾಣೆ ಹಾಗೂ ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ಆರೋಪಿಗಳನ್ನ ಇಡಲಾಗಿದ್ದು‌‌‌‌, ಕೆಲವೇ ಹೊತ್ತಿನಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಬಂಧಿತ ಆರೋಪಿಗಳು ಪಿಎಫ್​ಐ ಕಚೇರಿಗಳಿಗೆ ಹಾಗೂ ಪಿಎಫ್​ಐ ಹಿರಿಯ ನಾಯಕರುಗಳಿಗೆ ನೇರ ಲಿಂಕ್ ಇರುವುದು ಪತ್ತೆಯಾಗಿದೆ. ಪಿಎಫ್ಐ ಕಚೇರಿಯಲ್ಲಿ ಕೆಲಸ ಮಾಡುವವರು ಕರ್ನಾಟಕದಾದ್ಯಂತ ನೆಟ್ ವರ್ಕ್ ಹೊಂದಿರೋದು ಗೊತ್ತಾಗಿದೆ. ಬೃಹತ್ ಪ್ರಮಾಣದಲ್ಲಿ ಅನ್ಯ ಧರ್ಮದ ಯುವಕರನ್ನ ಸೆಳೆದು ಸಮಾಜಘಾತುಕ ಚಟುವಟಿಕೆಗಳಿಗೆ ಪ್ರಚೋದನೆ, ಧರ್ಮ - ಧರ್ಮಗಳ ನಡುವೆ ಗಲಭೆ ಸೃಷ್ಠಿ ದೇಶದ ಒಳಗೆ ಕ್ರೂರ ಕೃತ್ಯ ನಡೆಸಿ, ದೇಶದ ವಿರುದ್ಧ ಸಮರ ಸಾರುವುದು ಆನ್​ಲೈನ್​ ಮೂಲಕ ಪ್ರಚೋದನೆಕಾರಿ ಭಾಷಣ ಮಾಡಿರುವ ಪೊಲೀಸರಿಗೆ ಸಾಕ್ಷ್ಯ ಲಭಿಸಿವೆ ಎನ್ನಲಾಗುತ್ತಿದೆ.

ಕೆ.ಜಿ ಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿಗಳ ವಿವರ

  1. ನಾಸಿರ್ ಪಾಷಾ, ಪಿಳ್ಳಣ್ಣ ಗಾರ್ಡನ್, ಬೆಂಗಳೂರು
  2. ಮನ್ಸೂರ್ ಅಹಮ್ಮದ್, ಹೆಬಿಆರ್ ಲೇ ಔಟ್, ಬೆಂಗಳೂರು
  3. ಶೇಖ್ ಹಿಜಾಜ್ ಅಲಿ, ಕಲ್ಬುರ್ಗಿ
  4. ಮಹಮ್ಮದ್ ಖಲೀಂಉಲ್ಲಾ, ಶಾಂತಿನಗರ ಮೈಸೂರು
  5. ಮಹಮ್ಮದ್ ಅಶ್ರಫ್, ಮಂಗಳೂರು
  6. ಮಹಮ್ಮದ್ ಶರೀಫ್, ಬಜ್ಪೆ ಮಂಗಳೂರು
  7. ಅಬ್ದುಲ್ ಖಾದರ್, ತಲಪಾಡಿ ಮಂಗಳೂರು
  8. ಮಹಮ್ಮದ್ ತಾಸೀರ್, ಬಂಟ್ವಾಳ
  9. ಮೋಯಿನ್ ಉದ್ದೀನ್, ಮಂಗಳೂರು
  10. ನವಾಜ್ ಕರೂರು, ಮಂಗಳೂರು
  11. ಅಶ್ರಫ್, ಮಂಗಳೂರು
  12. ಅಬ್ದುಲ್ ರಜಾಕ್, ಪುತ್ತೂರು
  13. ಅಯೂಬ್ .ಕೆ ಅಂಗಾಡಿ, ಪುತ್ತೂರು
  14. ಶಾಹಿದ್ ಖಾನ್, ಶಿವಮೊಗ್ಗ
  15. ತಾಹೀರ್, ಹರಿನಗರ ದಾವಣಗೆರೆ
  16. ಇಮಾದುದ್ದೀನ್, ದಾವಣಗೆರೆ
  17. ಅಬ್ದುಲ್ ಅಜಿಜ್, ಶಿರಸಿ
  18. ಮೌಸಿನ್ ಅಬ್ದುಲ್, ಶಿರಸಿ
  19. ಮಹಮ್ಮದ್ ಫಯಾಜ್, ಕೊಪ್ಪಳ

ಇದನ್ನೂ ಓದಿ :ಬೆಂಗಳೂರಿನಲ್ಲಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ನಿವಾಸದ ಮೇಲೆ ಎನ್ಐಎ ದಾಳಿ

ABOUT THE AUTHOR

...view details