ಬೆಂಗಳೂರು:ಇತರೆ ದೇಶಗಳಿಗಿಂತ ಮುನ್ನವೇ ಕನ್ನಡ ಚಲನಚಿತ್ರಗಳು ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದೆ. ಚಿತ್ರೋತ್ಸವದಲ್ಲಿ ಅತ್ಯುತ್ತಮವಾದ ಕಲಾತ್ಮಕ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಿ ಅರ್ಥಪೂರ್ಣ ಚಿತ್ರಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಗಮ್ಯವಾಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಮಾರ್ಚ್ 3ರಿಂದ 10 ದಿನಗಳ ಕಾಲ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕೋವಿಡ್ ನಿಯಮ ಅನುಸರಿಸಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
FIAP ಮನ್ನಣೆ:ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮಾನ್ಯತೆ ನೀಡಿದೆ. ಈ ಮೂಲಕ ಚಿತ್ರೋತ್ಸವಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ವಿಶ್ವದ 45 ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳ ಪೈಕಿ ಬೆಂಗಳೂರು ಸೇರಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಾಮಾಜಿಕ ಸಂದೇಶ:ಕನ್ನಡಿಗರಿಗೆ ಜಾಗತಿಕ ಚಿತ್ರಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಚಿತ್ರೋತ್ಸವ ವೇದಿಕೆಯಾಗಬೇಕು. ಸಾಮಾಜಿಕ ಬದುಕಿನಲ್ಲಿ ಮನರಂಜನೆ ಹಾಸುಹೊಕ್ಕಾಗಿರುವುದರಿಂದ ಚಲನಚಿತ್ರಗಳು ಮುಖ್ಯವಾಗುತ್ತವೆ. ಚಿತ್ರೋತ್ಸವದ ಮೂಲಕ ಸಾಮಾಜಿಕ ಸಂದೇಶವನ್ನು ನೀಡಬೇಕು. ಸಿನಿಮಾಗಳಲ್ಲಿ ಆಸಕ್ತಿ ಇರುವ ನಿರ್ದಿಷ್ಟ ಜನ ಚಲನಚಿತ್ರೋತ್ಸವಕ್ಕೆ ಆಗಮಿಸುವುದರಿಂದ ನಿರ್ದಿಷ್ಟ ವಿಷಯವನ್ನು ಆಧರಿಸಿ ಚಲನಚಿತ್ರೋತ್ಸವಕ್ಕೆ ನಡೆಸುವುದು ಅಗತ್ಯ ಎಂದರು.
ಇದನ್ನೂ ಓದಿ:ಶನಿವಾರವೂ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸೂಚನೆ