ದೇವನಹಳ್ಳಿ (ಬೆಂ.ಗ್ರಾಮಾಂತರ): ವಿದೇಶಗಳಿಂದ ತಡರಾತ್ರಿ 1,396 ಜನರು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ತಪಾಸಣೆಗಾಗಿ ಅವರನ್ನು ದೇವನಹಳ್ಳಿಯ ಆಕಾಶ್ ಹಾಸ್ಪಿಟಲ್‌ಗೆ ಕಳುಹಿಸಲಾಗಿದೆ. ತಡರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ವಿವಿಧ ದೇಶಗಳಿಂದ ಕೆಐಎಎಲ್ಗೆ ಈ ಪ್ರಯಾಣಿಕರು ಆಗಮಿಸಿದ್ದರು.
ವಿದೇಶಗಳಿಂದ ಬೆಂಗಳೂರಿಗೆ ಬಂದ 1,396 ಪ್ರಯಾಣಿಕರು: 10 ಮಂದಿಗೆ ಸೋಂಕು ಶಂಕೆ - ರಾಜ್ಯದಲ್ಲಿ ಕೊರೊನಾ ಪ್ರಕರಣಗಳು
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ತಡರಾತ್ರಿ 1,396 ಜನರು ಆಗಮಿಸಿದ್ದಾರೆ. ಅದರಲ್ಲಿ 10 ಮಂದಿಗೆ ಶಂಕಿತ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ವಿದೇಶಗಳಿಂದ ಬೆಂಗಳೂರಿಗೆ ಬಂದ 1,396 ಪ್ರಯಾಣಿಕರು
ಇನ್ನು ತಪಾಸಣೆಯ ವೇಳೆ 10 ಮಂದಿಗೆ ಶಂಕಿತ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದೆ. 10 ಮಂದಿ ಪ್ರಯಾಣಿಕರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ 74 ಜನರು ಇದರಲ್ಲಿದ್ದಾರೆ.
ಬಿ ಗ್ರೇಡ್ನ 74 ಮಂದಿಗೆ ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ. ಇನ್ನು 1,312 ಜನರಿಗೆ ಸಿ ಗ್ರೇಡ್- ಸ್ಟ್ಯಾಂಪಿಂಗ್ ಮಾಡಿ ಮನೆಗಳಿಗೆ ಕಳುಹಿಸಲಾಗಿದ್ದು 1,212 ಮಂದಿಗೆ ಹೋಂ ಕ್ವಾರಂಟೈನ್ಗೆ ಸೂಚನೆ ನೀಡಲಾಗಿದೆ.