ಕರ್ನಾಟಕ

karnataka

ETV Bharat / state

13 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ವರ್ಗಾವಣೆ ಆದೇಶ ಪ್ರಕಟಿಸಿದ ರಾಜ್ಯ ಸರ್ಕಾರ..!

ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, 13 ಐಪಿಎಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ.

The State Government has issued the transfer order
13 ಐಪಿಎಸ್ ಅಧಿಕಾರಿಗಳ ವರ್ಗಾವಣೆ

By

Published : Jun 26, 2020, 10:29 PM IST

ಬೆಂಗಳೂರು: ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸೀಮಂತ್ ಕುಮಾರ್ ಸಿಂಗ್, ಐಜಿಪಿ ಆಡಳಿತ ವಿಭಾಗದಿಂದ ಐಜಿಪಿ ಕೇಂದ್ರ ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ.

ಕೆ.ವಿ ಶರತ್ ಚಂದ್ರ, ಐಜಿಪಿ ಕೇಂದ್ರ ವಲಯದಿಂದ ಐಜಿಪಿ ಆಡಳಿತ, ಡಾ.ಪಿ.ಎಸ್ ಹರ್ಷ ಮಂಗಳೂರು ನಗರ ಆಯುಕ್ತರಿಂದ, ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಆಯುಕ್ತ ಬೆಂಗಳೂರು, ವಿಕಾಶ್ ಕುಮಾರ್ ವಿಕಾಶ್ ಕಮ್ಯಾಂಡರ್ ನಕ್ಸಲ್ ನಿಗ್ರಹ ದಳದಿಂದ ಮಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

ವರ್ಗಾವಣೆ ಆದೇಶ ಪ್ರಕಟಿಸಿದ ರಾಜ್ಯ ಸರ್ಕಾರ

ಎಸ್.ಎನ್ ಸಿದ್ದರಾಮಪ್ಪ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಆಯುಕ್ತ ಬೆಂಗಳೂರಿನಿಂದ ಡಿಐಜಿಪಿ ಸಿಐಡಿ ಆರ್ಥಿಕ ಅಪರಾಧ ವಿಭಾಗ, ಬಿ.ಎಸ್ ಲೊಕೇಶ್ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಂದ ಡಿಐಜಿಪಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಡಾ‌.ಕೆ. ತ್ಯಾಗರಾಜನ್ ಡಿಐಜಿಪಿ ಸಿಐಡಿ ಆರ್ಥಿಕ ಅಪರಾಧ ವಿಭಾಗದಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತ, ಡಾ. ಸುಮನ್ ಡಿ ಪೆನ್ನೇಕರ್ ಕೊಡಗು ಎಸ್​ಪಿ​ಯಿಂದ ಡಿಸಿಪಿ ಸಿಎಆರ್ ಹೆಡ್ ಕ್ವಾರ್ಟರ್ಸ್ ಬೆಂಗಳೂರು, ಹರೀಶ್ ಪಾಂಡೆ ಚಿಕ್ಕಮಗಳೂರು ಎಸ್​ಪಿಯಿಂದ ಇಂಟಲಿಜೆನ್ಸ್ ಎಸ್​ಪಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ದಿವ್ಯಾ ಸಾರಾ ಥಾಮಸ್ ಡಿಸಿಪಿ ಸಿಎಆರ್ ಹೆಡ್ ಕ್ವಾರ್ಟರ್ಸ್ ನಿಂದ ಚಾಮರಾಜನಗರ ಎಸ್​​​ಪಿ, ಹ್ಯಾಕೆ ಅಕ್ಷಯ್ ಮಚೀಂದ್ರ ಬೆಂಗಳೂರು ಇಂಟಲಿಜೆನ್ಸ್ ಎಸ್​ಪಿಯಿಂದ ಚಿಕ್ಕಮಗಳೂರು ಎಸ್​ಪಿ, ಕ್ಷಮಾ ಮಿಶ್ರಾ ಸಿಐಡಿ ಎಸ್​ಪಿಯಿಂದ ಕೊಡಗು ಎಸ್​ಪಿ, ಎಚ್.ಡಿ ಆನಂದ್ ಕುಮಾರ್ ಚಾಮರಾಜನಗರ ಎಸ್​ಪಿಯಿಂದ ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details