ನೆಲಮಂಗಲ :ದಷ್ಟಪುಷ್ಟವಾಗಿಯೇ ಇದ್ದ ಹೋರಿ ಮತ್ತು ಹಸುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿದ ನೆಲಮಂಗಲ ಪೊಲೀಸರು 13 ಹೋರಿ ಮತ್ತು 2 ಹಸುಗಳ ರಕ್ಷಣೆ ಮಾಡಿದ್ದಾರೆ.
ಅಕ್ರಮವಾಗಿ ದಷ್ಟಪುಷ್ಟವಾಗಿದ್ದ ಜಾನುವಾರುಗಳ ಸಾಗಣೆ: ಇಬ್ಬರ ಬಂಧನ - Nelamangala city
ಅಕ್ರಮವಾಗಿ ಹಸುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದವರನ್ನು ಬಂಧಿಸಿ 13 ಹೋರಿ ಮತ್ತು 2 ಹಸುಗಳನ್ನ ರಕ್ಷಣೆ ಮಾಡಿದ್ದು ಶಿವಗಂಗೆಯ ಹೊನ್ನಮ್ಮಗವಿ ಮಠಕ್ಕೆ ನೀಡಲಾಗಿದೆ.
ನೆಲಮಂಗಲ ಪಟ್ಟಣದ ನವಯುಗ ಟೋಲ್ ಬಳಿ ಖಚಿತ ಮಾಹಿತಿ ನೆಲಮಂಗಲ ಟೌನ್ ಪೊಲೀಸರು ಲಾರಿ ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಹಸುಗಳನ್ನ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ರದುರ್ಗದಿಂದ ಬೆಂಗಳೂರಿನ ಯಶವಂತಪುರದ ಕಸಾಯಿಖಾನೆಗೆ ಹಸುಗಳ ಸಾಗಣೆ ಮಾಡಲಾಗತ್ತಿತ್ತು.
ಈ ಸಂಬಂಧ ಬಂದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿವಿಸಿದ ಪೊಲೀಸರಿಗೆ ಲಾರಿಗೆ ಪರವಾನಗಿ ಮತ್ತು ಹಸು ಸಾಗಣೆಗೆ ದಾಖಲೆ ಇಲ್ಲದಿರೋದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಹಸು ಸಾಗಿಸುತ್ತಿದ್ದ ರಫೀಕ್ ಲಾರಿ ಚಾಲಕ ಜಾಫರ್ ಷರೀಫ್ ನನ್ನ ಪೊಲೀಸರು ಬಂಧಿಸಿದ್ದಾರೆ. ರಕ್ಷಣೆ ಮಾಡಿದ 13 ಹೋರಿ ಮತ್ತು 2 ಹಸುಗಳನ್ನ ಶಿವಗಂಗೆಯ ಹೊನ್ನಮ್ಮಗವಿ ಮಠಕ್ಕೆ ನೀಡಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.