ಕರ್ನಾಟಕ

karnataka

ETV Bharat / state

126 ಕಾನ್ಸ್​ಟೇಬಲ್‌ಗಳಿಗೆ ಮುಂಬಡ್ತಿ - KSRP Constables promoted

ಕಡಿಮೆ ಅವಧಿಯಲ್ಲಿ ಸೇವೆ ಪೂರೈಸಿದ ಕೆಎಸ್‌ಆರ್‌ಪಿ ಘಟಕದ ಪುರುಷರು ಮತ್ತು ಮಹಿಳಾ ಕಾನ್ಸ್​ಟೇಬಲ್‌ಗಳಿಗೆ ಪದೋನ್ನತಿ ನೀಡಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ ಎಂದು ಎಡಿಜಿಪಿ ಆಲೋಕ್ ಕುಮಾರ್ ಹೇಳಿದ್ದಾರೆ.‌

126-ksrp-constables-promoted
126 ಕಾನ್‌ಸ್ಟೆಬಲ್‌ಗಳಿಗೆ ಬಡ್ತಿ

By

Published : Feb 25, 2021, 4:10 PM IST

ಬೆಂಗಳೂರು‌: ಕೆಎಸ್​ಆರ್​ಪಿ ಇಲಾಖೆ ಸ್ಥಳೀಯ ಹಾಗೂ ಸ್ಥಳೀಯೇತರ ಒಟ್ಟು 126 ಪುರುಷ ರಿಸರ್ವ್ ಪೊಲೀಸ್ ಕಾನ್ಸ್​ಟೇಬಲ್‌ಗಳಿಗೆ ರಿಸರ್ವ್ ಪೊಲೀಸ್​ ಹೆಡ್ ಕಾನ್ಸ್​ಟೇಬಲ್‌ಗಳಾಗಿ ಮುಂಬಡ್ತಿ ನೀಡಲಾಗಿದೆ.

ಇದೇ‌ ಮೊದಲ ಬಾರಿಗೆ ಕೆಎಸ್‌ಆರ್‌ಪಿ ಇಲಾಖೆಯಲ್ಲಿ ಕಾನ್ಸ್​ಸ್ಟೇಬಲ್​​​ ಹುದ್ದೆಯಲ್ಲಿ 6 ವರ್ಷ ಪೂರೈಸಿದ ಅನೇಕ ಸಿಬ್ಬಂದಿಗೆ ಹೆಡ್ ‌ಕಾನ್ಸ್​ಟೇಬಲ್ ಆಗಿ ಪದೋನ್ನತಿ ನೀಡಲಾಗಿದೆ. ಇವರಲ್ಲಿ ವಿಶೇಷವಾಗಿ ವಿಶಾಲ್ ಹೊಸಮನಿ ಎಂಬುವರು 27 ವರ್ಷ ವಯಸ್ಸಿನವರಾಗಿದ್ದು, ಇವರಿಗೆ 5 ವರ್ಷಗಳ ಸೇವೆಯಲ್ಲಿಯೇ ಹೆಡ್ ಕಾನ್ಸ್​ಟೇಬಲ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ.

ಕಾನ್ಸ್​ಸ್ಟೇಬಲ್​ಗಳಿಗೆ ಬಡ್ತಿ

ಓದಿ:5ನೇ ದಿನಕ್ಕೆ ಪಂಚಮಸಾಲಿ ಹೋರಾಟ: ಸಂಜೆಯ ಮಹತ್ವದ ಸಭೆಗೆ ಯತ್ನಾಳ್​ ದೌಡು, ಅಖಾಡಕ್ಕಿಳಿದ ಆನಂದ ಮಹಾಮನಿ

ಇದೇ ತಿಂಗಳ 23ರಂದು 4 ಮತ್ತು 5 ವರ್ಷಗಳ ಸೇವೆ ಪೂರೈಸಿದ ಒಟ್ಟು 72 ಮಹಿಳಾ ಪಿಸಿಗಳಿಗೆ ಹೆಡ್​ ಕಾನ್ಸ್​ಟೇಬಲ್​​ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಈ ರೀತಿ ಕಡಿಮೆ ಅವಧಿಯಲ್ಲಿ ಸೇವೆನ್ನು ಪೂರೈಸಿದ ಕೆಎಸ್‌ಆರ್‌ಪಿ ಘಟಕದ ಪುರುಷರು ಮತ್ತು ಮಹಿಳಾ ಕಾನ್ಸ್​ಟೇಬಲ್‌ಗಳಿಗೆ ಪದೋನ್ನತಿ ನೀಡಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ ಎಂದು ಎಡಿಜಿಪಿ ಆಲೋಕ್ ಕುಮಾರ್ ತಿಳಿದ್ದಾರೆ.‌

ABOUT THE AUTHOR

...view details