ಬೆಂಗಳೂರು :ರಾಜ್ಯದಲ್ಲಿಂದು 1,95,966 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. 1,224 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 29,42,250ಕ್ಕೆ ಏರಿಕೆಯಾಗಿದೆ.
ಇಂದು 1,668 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,85,700 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 19,318 ಸಕ್ರಿಯ ಪ್ರಕರಣಗಳು ಇವೆ. 22 ಮಂದಿ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,206ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ. 1.79ರಷ್ಟಿದ್ದು, ಪಾಸಿಟಿವಿಟಿ ದರ ಶೇ. 0.62 ಇದೆ.
ವಿಮಾನ ನಿಲ್ದಾಣಕ್ಕೆ ಬಂದ 485 ಜನರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದರೆ, 65 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.
ರೂಪಾಂತರಿ ವೈರಸ್ ಮಾಹಿತಿ :
1) ಡೆಲ್ಟಾ ( Delta/B.617.2) - 1089
2)ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) - 159
4) ಬೇಟಾ ವೈರಸ್ (BETA/B.1.351) - 7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) - 4
6) ಈಟಾ (ETA/B.1.525) - 1
ಇದನ್ನೂ ಓದಿ :FIR ದಾಖಲಾಗಿದೆ, ಶೀಘ್ರವೇ ಆರೋಪಿಗಳ ಬಂಧನ: ಪೊಲೀಸ್ ಆಯುಕ್ತ ಚಂದ್ರಗುಪ್ತ