ಬೆಂಗಳೂರು: ಕೃಷಿ ಚಟುವಟಿಕೆಗೆ ಬಳಕೆಯಾಗುವ ಪಂಪ್ಸೆಟ್ಗಳಿಗೆ ಶೇ12ರಷ್ಟು ಹಾಗೂ ಬಿಡಿ ಭಾಗಗಳಿಗೆ ಶೇ 18ರಷ್ಟು ಜಿಎಸ್ಟಿ ತೆರಿಗೆ ವಿಧಿಸಿರುವುದು ದುಬಾರಿಯಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ಮಾಡಬೇಕು ಎಂದು ರಾಜ್ಯ ಕೃಷಿ ಪಂಪ್ಸೆಟ್ ಮಾರಾಟಗಾರರ ಸಂಘದ ಅಧ್ಯಕ್ಷ ಫ್ರಾಂಕಿ ಹಾಲ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಪಂಪ್ ಸೆಟ್ಗಳ ತೆರಿಗೆ ಕುರಿತ ಘೋಷಣೆ ನಿರೀಕ್ಷೆ ಹುಸಿಯಾಗಿದ್ದು, ದುಬಾರಿ ಜಿಎಸ್ಟಿಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದರು.