ಬೆಂಗಳೂರು :ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಇಳಿಮುಖವಾಗದ ಕಾರಣ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಲಾಗಿದೆ. ತಪ್ಪಿದ್ದಲ್ಲಿ ಮಾರ್ಷಲ್ಸ್ ಹದ್ದಿನ ಕಣ್ಣಿಟ್ಟಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ, ಮಾರುಕಟ್ಟೆ, ಶಾಪಿಂಗ್ ಪ್ರದೇಶಗಳಲ್ಲಿ ಹೆಚ್ಚು ಜನ ಸೇರಿದ್ದರು. ಅಲ್ಲದೇ ಮಾಸ್ಕ್ ಧರಿಸುವುದನ್ನು ಮರೆತು ಓಡಾಡಿದ್ದರು. ಈ ಹಿನ್ನೆಲೆ ನಿನ್ನೆ ಒಂದೇ ದಿನ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ 868 ಪ್ರಕರಣಗಳಿಂದ, 2,17,000 ರೂ. ದಂಡ ವಿಧಿಸಲಾಗಿದೆ.