ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಜಾರಿಯಾದ್ರು, ಆ.1 ರಂದು ಬಕ್ರೀದ್ ಹಬ್ಬ ಇರುವ ಹಿನ್ನೆಲೆ ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಕುರಿ ವ್ಯಾಪಾರ ಜೋರಾಗಿದೆ.
ಬಕ್ರೀದ್ಗೆ 12 ದಿನ ಬಾಕಿ: ಲಾಕ್ಡೌನ್ ಮಧ್ಯೆ ಬಕ್ರೀದ್ ಕುರಿ ವ್ಯಾಪಾರ ಜೋರು - Bakreed sheep trade
ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಇದ್ರೂ ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಕುರಿ ವ್ಯಾಪಾರ ಮಾತ್ರ ಜೋರಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿಯಿಂದ ವ್ಯಾಪಾರಿಗಳು ನಗರಕ್ಕೆ ಬಂದು, ಕುರಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಬಕ್ರೀದ್ ಕುರಿ ವ್ಯಾಪರ
ಲಾಕ್ಡೌನ್ ಮಧ್ಯೆ ಬಕ್ರೀದ್ ಕುರಿ ವ್ಯಾಪಾರ ಜೋರು
ಜುಲೈ 14 ರಿಂದ ಒಂದು ವಾರಗಳ ಲಾಕ್ಡೌನ್ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಅಗತ್ಯ ವಸ್ತುಗಳನ್ನು ಬಿಟ್ಟು, ಬೇರೆ ಯಾವುದೇ ವಹಿವಾಟು ನಡೆಯಬಾರದು ಎಂದು ಆದೇಶವಿದ್ದರೂ ಕುರಿಗಳ ವಹಿವಾಟು ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ.
ಅಲ್ಲದೇ ಲಾಕ್ಡೌನ್ ವೇಳೆ ಬೆಂಗಳೂರಿಗೆ ನೋ ಎಂಟ್ರಿ ನೋ ಎಕ್ಸಿಟ್ ಎಂದು ಪೊಲೀಸ್ ಇಲಾಖೆ ಹೇಳಿದ್ದರೂ ಮಂಡ್ಯ, ಮದ್ದೂರು, ಮಳವಳ್ಳಿಯಿಂದ ವ್ಯಾಪಾರಿಗಳು ನಗರಕ್ಕೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
Last Updated : Jul 19, 2020, 4:57 PM IST