ಕರ್ನಾಟಕ

karnataka

ETV Bharat / state

ಇಳಿಕೆಯತ್ತ ಕೊರೊನಾ.. ರಾಜ್ಯದಲ್ಲಿಂದು 1,186 ಮಂದಿಗೆ ಸೋಂಕು, 24 ಮಂದಿ ಬಲಿ - ಕರ್ನಾಟಕ ಕೋವಿಡ್​ ಪ್ರಕರಣ ವರದಿ

ರಾಜ್ಯದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳು 23,316 ಇದ್ದು, ಪಾಸಿಟಿವಿಟಿ ದರ ಶೇ0.89ರಷ್ಟಿದೆ.

1186-people-tested-positive-in-karnataka
ಮತ್ತೆ ಇಳಿಕೆಯತ್ತ ಕೊರೊನಾ... ರಾಜ್ಯದಲ್ಲಿಂದು 1,186 ಮಂದಿಗೆ ಸೋಂಕು, 24 ಮಂದಿ ಬಲಿ

By

Published : Aug 9, 2021, 8:22 PM IST

ಬೆಂಗಳೂರು:ರಾಜ್ಯದಲ್ಲಿಂದು 1,32,192 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1186 ಮಂದಿಗೆ ಸೋಂಕು ದೃಢಪಟ್ಟಿದೆ. ಮತ್ತೊಮ್ಮೆ ಇಳಿಕೆಯ ದಾರಿ ಕಾಣುತ್ತಿರುವ ಸೋಂಕಿತರ ಸಂಖ್ಯೆ 29,19,711ಕ್ಕೆ ತಲುಪಿದೆ.

1,776 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 28,59,552 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 23,316ರಷ್ಟು ಇದೆ. ಈ ಮೂಲಕ ಪಾಸಿಟಿವಿಟಿ ದರ ಶೇ0.89ರಷ್ಟಿದೆ.

24 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,817ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ2.02ರಷ್ಟಿದೆ. ವಿಮಾನ ನಿಲ್ದಾಣದಿಂದ 2,143 ಜನರು ಆಗಮಿಸಿದ್ದು, ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ.‌ ಯುಕೆಯಿಂದ 638 ಪ್ರಯಾಣಿಕರು ಆಗಮಿಸಿದ್ದಾರೆ.

ರೂಪಾಂತರಿ ಮಾಹಿತಿ:

1) ಡೆಲ್ಟಾ ( Delta/B.617.2) - 1089
2)ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) - 159
4) ಬೇಟಾ ವೈರಸ್ (BETA/B.1.351) - 7
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 4 ಮಂದಿ
6) ಈಟಾ (ETA/B.1.525) - 1

ಇದನ್ನೂ ಓದಿ:ಯುಎಸ್​ನಲ್ಲಿ ರೂಪಾಂತರ ಕೋವಿಡ್‌ ಅಬ್ಬರ: ಪ್ರತಿದಿನ ಲಕ್ಷಾಂತರ ಸೋಂಕು ಪ್ರಕರಣ ಪತ್ತೆ

ABOUT THE AUTHOR

...view details