ಬೆಂಗಳೂರು:ರಾಜ್ಯದಲ್ಲಿಂದು 1143 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಓರ್ವ ಮೃತಪಟ್ಟಿದ್ದಾನೆ. ಇಂದು 1268 ಮಂದಿ ಬಿಡುಗಡೆಯಾಗಿದ್ದು, 13610 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 887815 ಸೋಂಕಿತರು ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿಂದು 1143 ಕೋವಿಡ್ ಪಾಸಿಟಿವ್; ಸೋಂಕಿಗೆ ಓರ್ವ ಬಲಿ - ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ
ರಾಜ್ಯದ ಇಂದಿನ ಕೋವಿಡ್ ವರದಿ ಹೀಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಂದು 1143 ಜನರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಯುಕೆಯಿಂದ ಬಂದ ಇಬ್ಬರು ಪ್ರಯಾಣಿಕರಲ್ಲಿಯೂ ಸಹ ಈ ಡೆಡ್ಲಿ ವೈರಸ್ ಪತ್ತೆಯಾಗಿದೆ.
ಸಂಗ್ರಹ ಚಿತ್ರ
ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 913483ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 12039 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 208ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 642 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 25 ಮಂದಿ ಗುಣಮುಖರಾಗಿದ್ದಾರೆ. ಓರ್ವ ಮೃತಪಟ್ಟಿದ್ದಾನೆ. ಯುಕೆಯಿಂದ ಬಂದ 36 ಜನರ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಇಬ್ಬರಲ್ಲಿ ಪಾಸಿಟಿವ್ ಬಂದಿದ್ದು 34 ಜನರ ವರದಿಗೆ ಕಾಯಲಾಗಿದೆ.