ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 2 ಲಕ್ಷ ಸಮೀಪಿಸುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ: ಇಂದು 114 ಮಂದಿ ಕೋವಿಡ್​ಗೆ ಬಲಿ.. - ಬೆಂಗಳೂರು ಕೊರೊನಾ ಸಾವಿನ ಸುದ್ದಿ

ರಾಜ್ಯದಲ್ಲಿ 24 ಗಂಟೆಯಲ್ಲಿ 114 ಮಂದಿ ಕೊರೊನಾದಿಂದ ಮೃತ ಪಟ್ಟಿದ್ದಾರೆ. ಈ ಮೂಲಕ 3,312 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Bangalore
114 ಮಂದಿ ಕೋವಿಡ್​ಗೆ ಬಲಿ

By

Published : Aug 11, 2020, 12:05 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು ಕೂಡ ಸಾವಿನ ಸಂಖ್ಯೆ ನೂರರ ಗಡಿದಾಟಿದೆ. 24 ಗಂಟೆಯಲ್ಲಿ 114 ಮಂದಿ ಮೃತ ಪಟ್ಟಿದ್ದಾರೆ. ಈ ಮೂಲಕ 3,312 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇಂದು 4,267 ಹೊಸ ಕೊರೊನಾ ಪಾಸಿಟಿವ್ ಕೇಸ್ ಪತ್ತೆ ಯಾಗಿದ್ದು, 1,82,354 ಖಚಿತ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಇನ್ನು ಮೂರೇ ದಿನದಲ್ಲಿ 2 ಲಕ್ಷಕ್ಕೆ ಸೋಂಕಿತರ ಸಂಖ್ಯೆ ತಲುಪಲಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಿತ್ಯ 5000- 6000 ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದು ‌ಹೀಗೆ ಮುಂದುವರೆದರೆ, ಮೂರೇ ದಿನದಲ್ಲಿ 2 ಲಕ್ಷ ದಾಟಿಲಿದೆ.

ಆದರೆ ಇತ್ತ 2 ಲಕ್ಷ ಸೋಂಕಿತರ ಸಂಖ್ಯೆ ದಾಟಲು ಶುರುವಾಗಿದ್ದರೆ, ಅತ್ತ ಗುಣಮುಖರ ಸಂಖ್ಯೆ 1 ಲಕ್ಷ ಸಮೀಪಿಸಲಿದೆ. ಈಗಾಗಲೇ ಖಚಿತ 1,82,354 ಸೋಂಕಿತರಲ್ಲಿ 99,126 ಗುಣಮುಖರಾಗಿದ್ದು, 79,908 ಸಕ್ರಿಯ ಪ್ರಕರಣಗಳು ಬಾಕಿ ಇವೆ. 681 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಇನ್ನು ಬರೋಬ್ಬರಿ 3,60,713 ಮಂದಿ ನಿಗಾವಣೆಯಲ್ಲಿ ಇದ್ದಾರೆ.

ಆಗಸ್ಟ್​​ನಲ್ಲಿ 100 ರ ಗಡಿ ದಾಟುತ್ತಿರುವ ಸಾವಿನ ಪ್ರಮಾಣ:
ಆಗಸ್ಟ್ 4 - 110
ಆಗಸ್ಟ್ 5 - 100
ಆಗಸ್ಟ್ 7 - 101
ಆಗಸ್ಟ್ 9 - 107
ಆಗಸ್ಟ್10 - 114

ABOUT THE AUTHOR

...view details