ಕರ್ನಾಟಕ

karnataka

Black Fungus: ದೃಷ್ಟಿ ಕಳೆದುಕೊಂಡಿದ್ದ ಚಿತ್ರದುರ್ಗದ 11 ವರ್ಷದ ಬಾಲಕ ಸಾವು

By

Published : Jul 8, 2021, 7:03 PM IST

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್​​ನಿಂದಾಗಿ ಬಾಲಕನೋರ್ವ ಮೃತಪಟ್ಟಿರುವುದು ದೃಢಪಟ್ಟಿದೆ. ಮೇ 30ರಂದು ಆಸ್ಪತ್ರೆಗೆ ದಾಖಲಾಗಿದ್ದ ಈತ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ.

11-year-old-boy-died-from-black-fungus-infection-in-bangalore
ವೈರಸ್​​ನಿಂದ ದೃಷ್ಟಿ ಕಳೆದುಕೊಂಡಿದ್ದ 11 ವರ್ಷದ ಬಾಲಕ ಸಾವು

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್​ ಮಾರಿಯಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಇದೀಗ ಬ್ಲ್ಯಾಕ್ ಫಂಗಸ್​ನಿಂದ ಬಳಲುತ್ತಿದ್ದ ಪುಟ್ಟ ಬಾಲಕ ಮೃತಪಟ್ಟಿದ್ಧಾನೆ.

ಚಿತ್ರದುರ್ಗ ನಿವಾಸಿಯಾಗಿದ್ದ ಬಾಲಕನಿಗೆ ಮೇ 30ರಂದು ಬ್ಲ್ಯಾಕ್ ಫಂಗಸ್​​​ ಕಾಣಿಸಿಕೊಂಡಿತ್ತು. ಚಿಕಿತ್ಸೆ ನೀಡುತ್ತಿರುವಾಗಲೇ ಕಣ್ಣುಗುಡ್ಡೆ ತೆಗೆಯಬೇಕಾದ ಪರಿಸ್ಥಿತಿ ಬಂದಿತ್ತು. ದುರಂತ ಅಂದರೆ ಆ ಬಾಲಕನಿಗೆ ಕೊರೊನಾ ಬಂದು ಹೋಗಿರುವುದು ತಿಳಿದಿರಲಿಲ್ಲ. ಆ್ಯಂಟಿಬಾಡಿ ಟೆಸ್ಟ್ ಮಾಡಿದಾಗಲೇ ಕೋವಿಡ್ ತಗುಲಿರುವ ವಿಚಾರ ಗೊತ್ತಾಗಿತ್ತು.

ಚಿತ್ರದುರ್ಗದಿಂದ ಮೈಸೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ಮಧ್ಯೆ ಫಂಗಸ್ ಮೆದುಳಿಗೆ ಹೋಗಬಾರದು ಎಂಬ ಕಾರಣಕ್ಕೆ ನಿಮ್ಹಾನ್ಸ್​ನಲ್ಲೂ ಚಿಕಿತ್ಸೆ ನೀಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ರಾಜ್ಯದಲ್ಲಿ ಪತ್ತೆ ಬ್ಲ್ಯಾಕ್ ಫಂಗಸ್‌ ಪ್ರಕರಣಗಳ ವಿವರ

ರಾಜ್ಯದಲ್ಲಿ ಈವರೆಗೆ 3,446 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಈ ಪಿಡುಗಿನಿಂದಾಗಿ ಒಟ್ಟು 298 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಒಂದರಲ್ಲೇ 1,088 ಕೇಸ್‌ಗಳು ಪತ್ತೆಯಾಗಿದ್ದರೆ, ಬೆಂಗಳೂರಲ್ಲಿ 101 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಕ್ಟೋರಿಯಾದಲ್ಲಿ 202, ಬೌರಿಂಗ್ ಆಸ್ಪತ್ರೆಯಲ್ಲಿ 329 ಹಾಗೂ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details