ಬೆಂಗಳೂರು:ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಹಲವು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಲ್ಲೂ ಕೊರೊನಾ ದೃಢಪಡುತ್ತಿರುವ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರು ಪೊಲೀಸರನ್ನ ಬೆಂಬಿಡದ ಕೋವಿಡ್: ಒಂದೇ ಠಾಣೆಯಲ್ಲಿ 11 ಸಿಬ್ಬಂದಿಗೆ ಸೋಂಕು! - ಬೆಂಗಳೂರಿನ ಒಂದೇ ಪೊಲೀಸ್ ಠಾಣೆಯ ಹನ್ನೊಂದು ಸಿಬ್ಬಂದಿಗೆ ಕೊರೊನಾ
ನಗರದ ಹಲವು ಪೊಲೀಸ್ ಠಾಣೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಕೊರೊನಾ ದಿನೇ ದಿನೆ ಪೊಲೀಸರನ್ನ ಕಾಡುತ್ತಿದೆ. ಕಳೆದೆರಡು ದಿನಗಳಲ್ಲಿ ನಗರದ ಪೂರ್ವ ವಿಭಾಗದ ಕಾಟನ್ ಪೇಟೆ ಪೊಲೀಸ್ ಠಾಣೆಯ 11 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಒಂದೇ ಠಾಣೆಯಲ್ಲಿ 11 ಸಿಬ್ಬಂದಿಗೆ ಸೋಂಕು
ಕಳೆದೆರಡು ದಿನಗಳಲ್ಲಿ ನಗರದ ಪೂರ್ವ ವಿಭಾಗದ ಕಾಟನ್ ಪೇಟೆ ಪೊಲೀಸ್ ಠಾಣೆಯ 11 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಕೆ. ಆರ್.ಮಾರ್ಕೆಟ್ ಠಾಣೆಯಲ್ಲಿ 14 ಪೊಲೀಸ್ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿತ್ತು.
ನಗರದ ಹಲವು ಪೊಲೀಸ್ ಠಾಣೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಕೊರೊನಾ ದಿನೇ ದಿನೆ ಪೊಲೀಸರನ್ನ ಕಾಡುತ್ತಿದೆ. ಕಾಟನ್ ಪೇಟೆಯ ಕಾನ್ಸ್ಟೇಬಲ್ಗಳು, ಹೆಡ್ ಕಾನ್ಸ್ಟೇಬಲ್ಗಳು ಹಾಗೂ ಎಎಸ್ಐ ಸೇರಿದಂತೆ, 11 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated : Jan 8, 2022, 9:46 PM IST