ಬೆಂಗಳೂರು:ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಗೆ ಮತ್ತೆ 11 ನಾಯಕರನ್ನು ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ. ಕಳೆದ ಬುಧವಾರ ಒಟ್ಟು 36 ಮಂದಿ ನಾಯಕರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಅದಕ್ಕೆ ಮತ್ತೆ 11 ಮುಖಂಡರು ಸೇರ್ಪಡೆಯಾಗಿದ್ದಾರೆ. ಈ ಮೂಲಕ 47 ಮಂದಿ ಸದಸ್ಯರ ಬಲವನ್ನು ಚುನಾವಣಾ ಪ್ರಚಾರ ಸಮಿತಿ ಪಡೆದಂತಾಗಿದೆ.
ಬಿ ಎಲ್ ಶಂಕರ್, ಪರಮೇಶ್ವರ್ ನಾಯಕ್, ಉಮಾಶ್ರೀ, ರಮೇಶ್ ಕುಮಾರ್, ಹೆಚ್ ಎಂ ರೇವಣ್ಣ, ಎ ಎಂ ಹಿಂಡಸಗೇರಿ, ಜಮೀರ್ ಅಹಮದ್ ಖಾನ್, ಶಿವಾನಂದ ಪಾಟೀಲ್, ಶರಣ ಬಸಪ್ಪ ಗೌಡ ದರ್ಶನಾಪುರ, ಡಾ.ಶರಣ ಪ್ರಕಾಶ್ ಪಾಟೀಲ್ - ಪ್ರಚಾರ ಸಮಿತಿಗೆ ಹೊಸದಾಗಿ ಸೇರಿದ ನಾಯಕರು.
ಕಾಂಗ್ರೆಸ್ ಚುನಾವಣಾ ಸಮಿತಿಗೆ ಮತ್ತೆ 11 ಹೆಸರು ಸೇರ್ಪಡೆ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಈ ಸಮಿತಿ ರಚನೆ ಮಾಡಲಾಗಿದ್ದು, ಭಾನುವಾರ ಇದರ ಮೊದಲ ಸಭೆ ಬೆಳಗಾವಿಯಲ್ಲಿ ನಡೆದಿದೆ. ಇದು ಕಾಂಗ್ರೆಸ್ ಚುನಾವಣಾ ಚಟುವಟಿಕೆಗಳ ತೀರ್ಮಾನ ಮಾಡಲಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಅರ್ಜಿಗಳ ಪರಿಶೀಲನೆ ನಡೆಸಲಿರುವ ಸಮಿತಿ, ಕ್ಷೇತ್ರಕ್ಕೆ ಕನಿಷ್ಠ 1 ರಿಂದ ಗರಿಷ್ಠ 3 ಮಂದಿ ಹೆಸರನ್ನ ಶಿಫಾರಸು ಮಾಡಲಿದೆ. ದೆಹಲಿಯಲ್ಲಿ ಸಭೆ ನಡೆದ ಬಳಿಕ ಸಮಿತಿ ರಚನೆಯಾಗಿದೆ.
ಇದನ್ನೂ ಓದಿ:ಗಾಂಧೀಜಿ ಸಾವಿನಲ್ಲಿ ಸಾವರ್ಕರ್ ಕೈವಾಡವಿದೆ, ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ
ಮೊದಲ ಪಟ್ಟಿಯ ನಾಯಕರು:ಈ ಮೊದಲು36 ಜನ ಸದಸ್ಯರನ್ನೊಳಗೊಂಡ ಎಲೆಕ್ಷನ್ ಸಮಿತಿ ರಚಿಸಲಾಗಿತ್ತು. ಈ ಪಟ್ಟಿಯಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್, ಎಂ ಬಿ ಪಾಟೀಲ್, ದಿನೇಶ್ ಗುಂಡೂರಾವ್, ಹೆಚ್ ಕೆ ಪಾಟೀಲ್, ಕೆ ಹೆಚ್ ಮುನಿಯಪ್ಪ, ವೀರಪ್ಪ ಮೊಯ್ಲಿ, ಡಾ.ಜಿ ಪರಮೇಶ್ವರ್, ಆರ್ ವಿ ದೇಶಪಾಂಡೆ, ಅಲ್ಲಮ್ ವೀರಬದ್ರಪ್ಪ, ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ದೃವ ನಾರಾಯಣ್, ಸಲೀಂ ಅಹ್ಮದ್, ರೆಹಮಾನ್ ಖಾನ್, ಮಾರ್ಗ್ರೆಟ್ ಆಳ್ವಾ, ಕೆ ಜೆ ಜಾರ್ಜ್, ಯು ಟಿ ಖಾದರ್, ಕೆ ಗೋವಿಂದರಾಜ್, ಹೆಚ್ ಸಿ ಮಹದೇವಪ್ಪ, ಚೆಲುವ ರಾಯ ಸ್ವಾಮಿ, ಬಸವರಾಜ್ ರಾಯರೆಡ್ಡಿ, ಬಿ ಕೆ ಸುರೇಶ್, ಎಲ್ ಹನುಮಂತಯ್ಯ, ನಾಸಿರ್ ಹುಸೇನ್, ಎಂ ಆರ್ ಸೀತಾರಾಮ್, ಶಿವರಾಜ್ ತಂಗಡಗಿ, ವಿನಯ್ ಕುಲಕರ್ಣಿ, ವಿ ಎಸ್ ಉಗ್ರಪ್ಪ, ಬೋಸ್ ರಾಜ್, ವಿನಯ್ ಕುಮಾರ್, ಶರಣಪ್ಪ, ಜಿ ಪದ್ಮಾವತಿ, ಶಾಮನೂರ್ ಶಿವಶಂಕರಪ್ಪ ಹಾಗೂ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್.