ಬೆಂಗಳೂರು:ನಗರದಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ ಅನೇಕರು ಕೊರೊನಾಗೆ ತುತ್ತಾಗಿದ್ದಾರೆ. ಅದರಲ್ಲಿ ಈಗ ಪೊಲೀಸ್ ಇಲಾಖೆಯ 109 ಜನ ಸಿಬ್ಬಂದಿ ಗುಣಮುಖರಾಗಿ ಡ್ಯೂಟಿಗೆ ಹಾಜರಾಗಿದ್ದಾರೆ. ಇನ್ನು 109 ಮಂದಿ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಆಡಳಿತ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರು ಸಂತಸ ಹಂಚಿಕೊಂಡಿದ್ದಾರೆ.
ಖಾಕಿ ಪಡೆಗೆ ಸಿಹಿ ಸುದ್ದಿ: ಕೊರೊನಾ ಗೆದ್ದು ಕರ್ತವ್ಯಕ್ಕೆ ಹಾಜರಾದ 109 ಪೊಲೀಸರು - Bangalore 109 Police cured from Corona News
ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಬಂದು, ಆಸ್ಪತ್ರೆಗೆ ಹೋಗಿ ಎದೆಗುಂದದೆ ಚಿಕಿತ್ಸೆ ಪಡೆದು, ಮತ್ತೆ ಶಕ್ತಿ ಶಾಲಿಯಾಗಿ ವಾಪಸ್ ಆಗಿದ್ದಾರೆ . ಮತ್ತೆ ಮಾಸ್ಕ್, ಫೇಸ್ಸೀಲ್ಡ್ ಹಾಕಿಕೊಂಡು ಕೆಲಸ ಮಾಡಲು ಸಿಬ್ಬಂದಿ ರೆಡಿ ಇದ್ದಾರೆಂದು ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಕೊರೊನಾ ಬಂದು, ಆಸ್ಪತ್ರೆಗೆ ಹೋಗಿ ಎದೆಗುಂದದೆ ಚಿಕಿತ್ಸೆ ಪಡೆದು, ಮತ್ತೆ ಶಕ್ತಿ ಶಾಲಿಯಾಗಿ ವಾಪಸ್ ಆಗಿದ್ದಾರೆ. ಮತ್ತೆ ಮಾಸ್ಕ್, ಫೇಸ್ಸೀಲ್ಡ್ ಹಾಕಿಕೊಂಡು ಕೆಲಸ ಮಾಡಲು ಸಿಬ್ಬಂದಿ ರೆಡಿ ಇದ್ದಾರೆಂದು ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಸದ್ಯ ಪೊಲೀಸರಲ್ಲಿ ಸೋಂಕಿತರ ಸಂಖ್ಯೆ ಒಟ್ಟು 918 ಏರಿಕೆಯಾಗಿದ್ದು, ಒಟ್ಟು 615 ಮಂದಿ ಗುಣಮುಖರಾಗಿ, ಅದರಲ್ಲಿ 109 ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಹಾಗೆ ಸೋಂಕಿತರ ಸಂಪರ್ಕದಲ್ಲಿರುವ 807ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಾಜರಾಗುವುದರಿಂದ ಮತ್ತಷ್ಟು ಬಲ ಹೆಚ್ಚಾಗಿದೆ.