ಬೆಂಗಳೂರು:ರಾಜ್ಯದಲ್ಲಿ ಇಂದು 1,074 ಮಂದಿಗೆ ಕೋವಿಡ್(COVID) ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,59,164 ಕ್ಕೆ ಏರಿಕೆಯಾಗಿದೆ. ಈ ದಿನ ನಾಲ್ವರು ಸೋಂಕಿತರ ಕೋವಿಡ್ಗೆ ಬಲಿಯಾಗಿದ್ದು, ಈವರೆಗೆ ಒಟ್ಟುಮೃತಪಟ್ಟವರ ಸಂಖ್ಯೆ 37,462 ಕ್ಕೆ ಏರಿಕೆಯಾಗಿದೆ.
ಇಂದು 1,136 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಒಟ್ಟು 29,04,683 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 16,992 ಪ್ರಕರಣಗಳು ಸಕ್ರಿಯವಾಗಿವೆ.