ಬೆಂಗಳೂರು:ಕೋವಿಡ್-19 ಮೊದಲ ಅಲೆಗಿಂತ, ಎರಡನೇ ಅಲೆಯು ಅಪಾಯಕಾರಿ ಪ್ರಮಾಣದಲ್ಲಿ ಹಬ್ಬುತ್ತಿದೆ. ಇದೇ ಮೊದಲ ಬಾರಿಗೆ ನಿನ್ನೆ ನಗರದಲ್ಲಿ 10,497 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ನಗರದಲ್ಲಿ ಮೊದಲ ಅಲೆ ಮಾರ್ಚ್ 2020ಕ್ಕೆ ಆರಂಭವಾಗಿ ಅಕ್ಟೋಬರ್ 8ರಂದು ಗರಿಷ್ಠ ಪ್ರಕರಣ 5,121 ಜನರಲ್ಲಿ ಪತ್ತೆಯಾಗಿತ್ತು. ಆದರೆ ಎರಡನೇ ಅಲೆಯ ಆರಂಭದಲ್ಲೇ, ಏಪ್ರಿಲ್ ತಿಂಗಳಲ್ಲೇ ಸೋಂಕಿನ ಪ್ರಮಾಣ 10 ಸಾವಿರ ದಾಟುವ ಮೂಲಕ ಆತಂಕ ಹುಟ್ಟಿಸಿದೆ.
ಪ್ರತಿನಿತ್ಯ ಎರಡು ಸಾವಿರ ಪ್ರಕರಣ ಹೆಚ್ಚಳ:
ನಗರದಲ್ಲಿ ಪ್ರತಿನಿತ್ಯ ಎರಡು ಸಾವಿರ ಪ್ರಕರಣ ಹೆಚ್ಚಳವಾಗುತ್ತಿದೆ. ಮಂಗಳವಾರ 5,500 ಜನರಿಗೆ ಸೋಂಕು ಹರಡಿದ್ರೆ, ಬುಧವಾರ 8,155 ಜನರಲ್ಲಿ ಹಾಗೂ ಗುರುವಾರ 10,497 ಜನರಲ್ಲಿ ದೃಢಪಟ್ಟಿದೆ. ಅಲ್ಲದೆ ಬೆಂಗಳೂರಿನ ಸಕ್ರಿಯ ಪ್ರಕರಣಗಳ ಸಂಖ್ಯೆ 71,827ಕ್ಕೆ ಏರಿಕೆಯಾಗಿದೆ. 174 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾಕಷ್ಟು ಜನ ಐಸಿಯು ಬೆಡ್ ಸಿಗದೆ ಪರದಾಡುವಂತಾಗಿದೆ.
20ರಿಂದ 49 ವರ್ಷದೊಳಗಿನವರಲ್ಲೇ ಹೆಚ್ಚು ಸೋಂಕು ಪತ್ತೆಯಾಗಿದ್ದು, 6,674 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ:ICMR ಪೋರ್ಟಲ್ ಸಮಸ್ಯೆ: ಬೆಂಗಳೂರಿನಲ್ಲಿ ಕಡಿಮೆ ಕೋವಿಡ್ ಪ್ರಕರಣ ದಾಖಲು