ಕರ್ನಾಟಕ

karnataka

ETV Bharat / state

ಅಕ್ರಮ ವಲಸಿಗರ ವಿರುದ್ಧ 103 ಪ್ರಕರಣ ದಾಖಲು: ಹೈಕೋರ್ಟ್‌ಗೆ ಮಾಹಿತಿ - ಬೆಂಗಳೂರು ಅಕ್ರಮ ವಲಸಿಗರ ವಿರುದ್ಧ 103 ಪ್ರಕರಣ ದಾಖಲು

ಅಕ್ರಮ ವಾಸ ಆರೋಪದಲ್ಲಿ ಕಳೆದ 3 ವರ್ಷದಲ್ಲಿ 103 ಪ್ರಕರಣ ದಾಖಲಿಸಿಕೊಂಡು 270 ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

103 cases registered against illegal migrants
ಹೈಕೋರ್ಟ್‌

By

Published : Dec 19, 2019, 11:20 PM IST

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ವಾಸ ಆರೋಪದಲ್ಲಿ ಕಳೆದ 3 ವರ್ಷದಲ್ಲಿ 103 ಪ್ರಕರಣ ದಾಖಲಿಸಿಕೊಂಡು, 270 ವಿದೇಶಿಗರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಈ ಕುರಿತು ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಎಸ್‌ಐಟಿ (ವಿಶೇಷ ತನಿಖಾ ತಂಡ) ನೇತೃತ್ವದ ತಂಡ ತನಿಖೆ ನಡೆಸಿ, ರಾಜ್ಯದಲ್ಲಿ ಅಕ್ರಮ ವಾಸ ಆರೋಪದಲ್ಲಿ ಕಳೆದ 3 ವರ್ಷದಲ್ಲಿ 103 ಪ್ರಕರಣಗಳು ದಾಖಲಾಗಿವೆ.ಇನ್ನು 270 ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ, ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿಗಳ ಕಚೇರಿಗೆ ವರದಿ ನೀಡಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಬಿ.ವಿ.ಕಷ್ಣ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ABOUT THE AUTHOR

...view details