ಕರ್ನಾಟಕ

karnataka

By

Published : Sep 20, 2020, 7:39 PM IST

ETV Bharat / state

ರಾಜ್ಯದಲ್ಲಿಂದು 8191 ಜನರಿಗೆ ಸೋಂಕು ದೃಢ: ಲಕ್ಷಕ್ಕಿಂತ ಕಡಿಮೆಯಾದ ಸಕ್ರಿಯ ಪ್ರಕರಣಗಳು

ಇತ್ತ ಸೋಂಕಿತರ ನೇರ ಸಂಪರ್ಕದಲ್ಲಿ 5,52,378. ದ್ವಿತೀಯ ಹಂತದಲ್ಲಿ 5,00,209 ಮಂದಿ ಸಂಪರ್ಕದಲ್ಲಿ ಇದ್ದಾರೆ. ಹಾಗೆಯೇ 5,09,512 ಮಂದಿ ಕಳೆದ 14 ದಿನಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ..

101 people dies by corona in karnataka
ರಾಜ್ಯದಲ್ಲಿಂದು 8191 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು, ಇಂದು ಕೂಡ 60,477 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, 8191 ಸೋಂಕು ದೃಢಪಟ್ಟಿದೆ. ಈ ಮೂಲಕ 5,19,537ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ.

ಇತ್ತ 8611 ಗುಣಮುಖರಾಗಿದ್ದು 4,13,452 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳು 98,043 ಇದ್ದು, ಇದರಲ್ಲಿ 811 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ 101 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8023 ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.

ಇತ್ತ ಸೋಂಕಿತರ ನೇರ ಸಂಪರ್ಕದಲ್ಲಿ 5,52,378. ದ್ವಿತೀಯ ಹಂತದಲ್ಲಿ 5,00,209 ಮಂದಿ ಸಂಪರ್ಕದಲ್ಲಿ ಇದ್ದಾರೆ. ಹಾಗೆಯೇ 5,09,512 ಮಂದಿ ಕಳೆದ 14 ದಿನಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಬೆಂಗಳೂರಿನಲ್ಲಿ 3322 ಸೋಂಕು ದೃಢ, 32 ಮಂದಿ ಬಲಿ:ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, 3322 ಹೊಸ ಸೋಂಕು ದೃಢಪಟ್ಟಿದ್ದು, ಈ ಮೂಲಕ 1,94,760ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 2970 ಗುಣಮುಖರಾಗಿದ್ದು 1,50,348 ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 41,754 ಸಕ್ರಿಯ ಪ್ರಕರಣ ಇದ್ದು 32 ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 2657ಕ್ಕೆ ಏರಿಕೆ ಆಗಿದೆ.

ABOUT THE AUTHOR

...view details