ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 101ಕ್ಕೇರಿದ ಕೊರೊನಾ ಪೀಡಿತರು.. ಈವರೆಗೆ 8 ಜನರು ಗುಣಮುಖ.. - ಕೊರೊನಾ ಸುದ್ದಿ

ದಿನೇದಿನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರ ನಡುವೆಯೇ 8 ಜನ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ 101ಕ್ಕೇರಿದ ಕೊರೊನಾ ಪಾಸಿಟಿವ್​
ರಾಜ್ಯದಲ್ಲಿ 101ಕ್ಕೇರಿದ ಕೊರೊನಾ ಪಾಸಿಟಿವ್​

By

Published : Mar 31, 2020, 9:13 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ವೈರಸ್ ಶತಕ ಬಾರಿಸಿ‌ ಇನ್ನೂ ಏರಿಕೆ ಆಗುತ್ತಲೇ ಇದೆ. ಈವರೆಗೆ 101 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಗುಣಮುಖರಾದ 8 ಜನರನ್ನ ಡಿಸ್ಜಾರ್ಜ್ ಮಾಡಲಾಗಿದೆ.

ಸೋಂಕಿತರ ಹಿಸ್ಟರಿ ಹೀಗಿದೆ..

  • ರೋಗಿ-89: 52 ವರ್ಷದ ವ್ಯಕ್ತಿಯು ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿ. ಮಾರ್ಚ್ 16ರಂದು ಬೆಂಗಳೂರಿಗೆ ಪ್ರಯಾಣಿಸಿದ ಹಿನ್ನೆಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-90: 48 ವರ್ಷದ ಮಹಿಳೆ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿ. ಇವರು ಮಾರ್ಚ್ 16ರಂದು ಬೆಂಗಳೂರು ಪ್ರಯಾಣಿಸಿದ ಪ್ರಯಾಣ ಹಿನ್ನೆಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-91: 26 ವರ್ಷದ ಮಹಿಳೆ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದಾರೆ. ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ್ದರು. ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-92: 40 ವರ್ಷದ ಪುರುಷ, ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದಾರೆ. (P59 ಗಂಡನ ಸಂಪರ್ಕ), ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ -93 : 19 ವರ್ಷದ ಯುವಕ. ಬೆಂಗಳೂರು ಜಿಲ್ಲೆಯ ನಿವಾಸಿ. ನ್ಯೂಯಾರ್ಕ್, ಯುಎಸ್‌ಎನಿಂದ ಮಾರ್ಚ್ 22 ರಂದು ಭಾರತಕ್ಕೆ ವಾಪಸಾಗಿರುವ ಪ್ರಯಾಣದ ಹಿನ್ನೆಲೆ ಇರುತ್ತದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ- 94: 40 ವರ್ಷದ ಮಹಿಳೆ. ಗೌರಿಬಿದನೂರು-ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಯಾಗಿರುತ್ತಾರೆ. ಇವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-95: 35 ವರ್ಷದ ಪುರುಷ. ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ. (P52 ಸಂಪರ್ಕಿತ), ಇವರನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-96: 41 ವರ್ಷದ ಪುರುಷ. ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ. (P52 ಸಂಪರ್ಕಿತ). ಇವರನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-97: 34 ವರ್ಷದ ಪುರುಷ. ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ. ದುಬೈ ದೇಶಕ್ಕೆ ಪ್ರಯಾಣ ಬೆಳಸಿ ಮಾರ್ಚ್ 18 ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಇರುತ್ತದೆ. ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ-98 : 26 ವರ್ಷದ ಪುರುಷ. ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದಾರೆ. ದುಬೈ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 20ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಇರುತ್ತದೆ. ಇವರನ್ನು ಉತ್ತರ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
  • ರೋಗಿ- 99 : 60 ವರ್ಷದ ಕಲರ್ಬುಗಿ ಜಿಲ್ಲೆಯ ನಿವಾಸಿಯಾಗಿದ್ದಾರೆ. (ರೋಗಿ9 ಸಂಪರ್ಕ ಪತ್ನಿ) ಇವರನ್ನ ಕಲರ್ಬುಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
  • ರೋಗಿ-100: 40 ವರ್ಷದ ಪುರುಷ ಬೆಂಗಳೂರಿನ ನಿವಾಸಿ. ದುಬೈ ದೇಶಕ್ಕೆ ಪ್ರಯಾಣ ಬೆಳೆಸಿ, ಮಾರ್ಚ್ 20 ರಂದು ಭಾರತಕ್ಕೆ ವಾಪಸ್‌ ಆಗಿದ್ದಾರೆ. ಬೆಂಗಳೂರಿನಲ್ಲಿ ಪ್ರತ್ಯೇಕ ಆಸ್ಪತ್ರೆಗೆ ಇರಿಸಲಾಗಿದೆ.
  • ರೋಗಿ- 101: 62 ವರ್ಷದ ಮಹಿಳೆ. ಬೆಂಗಳೂರು ನಿವಾಸಿಯಾಗಿರುತ್ತಾರೆ.‌ ಇವರ ವೈದ್ಯಕೀಯ ತನಿಖೆಯು ಪ್ರಗತಿಯಲ್ಲಿದೆ. ಬೆಂಗಳೂರಿನ ಚಿಕಿತ್ಸೆ ಮುಂದುವರಿದಿದೆ.

ಒಟ್ಟು ರಾಜ್ಯದಲ್ಲಿ 101 ಪ್ರಕರಣಗಳು :

ಬೆಂಗಳೂರು - 45 ಪ್ರಕರಣ

ಮೈಸೂರು - 14 ಪ್ರಕರಣ

ಚಿಕ್ಕಬಳ್ಳಾಪುರ - 9 ಪ್ರಕರಣ

ದಕ್ಷಿಣ ಕನ್ನಡ - 8 ಪ್ರಕರಣ

ಉತ್ತರ ಕನ್ನಡ - 8 ಪ್ರಕರಣ

ಕಲಬುರ್ಗಿ- 4 ಪ್ರಕರಣ

ದಾವಣಗೆರೆ - 3 ಪ್ರಕರಣ

ಉಡುಪಿ - 3 ಪ್ರಕರಣ

ಕೊಡಗು - 1 ಪ್ರಕರಣ

ಧಾರವಾಡ -1 ಪ್ರಕರಣ

ತುಮಕೂರು - 2 ಪ್ರಕರಣ ಪತ್ತೆ.

ABOUT THE AUTHOR

...view details