ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನವನ್ನು ರಾಜ್ಯದಲ್ಲೆಡೆ ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸಬೇಕಿತ್ತು. ಆದರೆ, ವಿಪರ್ಯಾಸ ಎಂಬಂತೆ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಉತ್ತರ ಕರ್ನಾಟಕದ ಬಹುತೇಕ ಭಾಗ ನೆರೆಗೆ ಕೊಚ್ಚಿ ಹೋಗಿದೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹ ನಿಲ್ಲಲಿಯೆಂದು ಬೆಂಗಳೂರಿನಲ್ಲಿ ಪೂಜೆ! - ನೈಸರ್ಗಿಕ ವಿಕೋಪ
ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸುತ್ತಿರುವ ಜನರ ಕಷ್ಟವನ್ನು ನಿವಾರಿಸಿವುಂತೆ ಕೋರಿ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಸರ್ಕಲ್ ಮಾರಮ್ಮನ ಎದುರು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.
ಇಂತಹ ಸಂದರ್ಭದಲ್ಲಿ ತಮ್ಮ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರನ್ನು ದೇವರು ನೆರೆಯಿಂದ ಕಾಪಾಡಲಿ ಹಾಗೂ ಪ್ರವಾಹ ನಿಲ್ಲುವಂತೆ ಕೋರಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ದೇವರ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು.
ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ವಿಶೇಷ ದಿನದಂದು ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸುತ್ತಿರುವ ಜನರ ಕಷ್ಟವನ್ನು ನಿವಾರಿಸಿ ಪ್ರವಾಹ ತಡೆದು ಜನರ ಜನಜೀವನ ಸುಧಾರಿಸುವಂತೆ ಕೋರಿ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಸರ್ಕಲ್ ಮಾರಮ್ಮನ ಎದುರು 101ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.