ಬೆಂಗಳೂರು: ನಗರದ ಅಪೋಲೊ ಆಸ್ಪತ್ರೆ ರೋಬೊಟ್ ನೆರವಿನ ಹೃದಯ ಶಸ್ತ್ರಚಿಕಿತ್ಸೆ ಘಟಕದಲ್ಲಿ 100 ರೋಬೊಟಿಕ್ಸ್ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅಪೋಲೊ ಹಾಸ್ಪಿಟಲ್ಸ್ ಬೆಂಗಳೂರು ಪ್ರಕಟಿಸಿದೆ.
ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ತಂಡವು "ಡ ವಿಂಚಿ ರೋಬೊಟಿಕ್" ಸೌಲಭ್ಯದ ನೆರವಿನಿಂದ ತುಂಬ ಸಂಕೀರ್ಣವಾಗಿದ್ದ ಮಿಟ್ರಲ್ ವಾಲ್ಸ್ನ ಮಿನಿಮಲಿ ಇನ್ವ್ಯಾಸಿವ್ ಕಾರ್ಡಿಯಾಕ್ ಸರ್ಜರಿಯನ್ನು ಕೇವಲ 70 ನಿಮಿಷಗಳಲ್ಲಿ ಪೂರ್ಣಗೊಳಿಸಿರುವುದಾಗಿಯೂ ಆಸ್ಪತ್ರೆ ಹೇಳಿದೆ.
ಹೃದಯ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಕ, ರೋಬೊಟಿಕ್ ಕಾರ್ಡಿಯಾಕ್ ಸರ್ಜರಿ ಯುನಿಟ್ನ ಮುಖ್ಯಸ್ಥ ಮತ್ತು ಹಿರಿಯ ಸಲಹೆಗಾರ ಡಾ. ಸತ್ಯಕಿ ನಂಬಾಳ ಅವರು ಈ ಬಗ್ಗೆ ಮಾತನಾಡಿ, 'ಹೃದಯರಕ್ತನಾಳದ ಕಾಯಿಲೆಗಳು ರೋಗಿಗಳ ಬದುಕಿನ ಅತ್ಯಂತ ನಿರ್ಣಾಯಕ ವರ್ಷಗಳಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಈ ಮೂಲಕ ವಿನಾಶಕಾರಿಯಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಉಂಟು ಮಾಡುತ್ತವೆ.
ರೋಬೊಟ್ ನೆರವಿನ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಗರಿಷ್ಠ ಮಟ್ಟದ ಸಮರ್ಪಣೆ ಮತ್ತು ಪೂರ್ವ ಸಿದ್ಧತೆಗಳ ಅಗತ್ಯ ಇರುತ್ತದೆ. 2019ರ ಅಂತ್ಯದ ವೇಳೆಗೆ ಆರಂಭಗೊಂಡಿದ್ದ ಈ ಸೌಲಭ್ಯ ಈವರೆಗೆ 100 ರೋಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ಆಸ್ಪತ್ರೆ ಎಂಬ ಹೆಮ್ಮೆ ನಮ್ಮದಾಗಿದೆ.
ಎದೆಯ ಎಲುಬನ್ನು ವಿಭಜಿಸುವ ಸಾಂಪ್ರದಾಯಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ಡ ವಿಂಚಿ ಕ್ಸಿ (da Vinci Xi) ನವೀನ ತಂತ್ರಜ್ಞಾನವು ಸಂಕೀರ್ಣವಾದ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸೆಗಳನ್ನು ಸಣ್ಣ ಭೇದನದ ಮೂಲಕ ಮತ್ತು ನಿಖರ ಚಲನೆಯ ನಿಯಂತ್ರಣದ ಮೂಲಕ ನೆರವೇರಿಸಲು ನೆರವಾಗುತ್ತದೆ ಎಂದರು.
'ಇದಕ್ಕೆ ಪೂರಕವಾಗಿ ಹೇಳುವುದಾದರೆ, ಸುಸ್ಪಷ್ಟ ಚಿತ್ರಣ ನೀಡುವ ಹೈ-ಡೆಫಿನಿಷನ್ ಕ್ಯಾಮೆರಾ, ಕನ್ಸಲ್ ಸ್ಕಿನ್ನಲ್ಲಿ ಶಸ್ತ್ರಚಿಕಿತ್ಸಕರಿಗೆ ಎದೆಯ ಸ್ಪಷ್ಟ, ಮೂರು ಆಯಾಮದ (3D) ವಿವರಗಳನ್ನು ಒದಗಿಸುತ್ತದೆ.
ಈ ಸೌಲಭ್ಯದ ಸಹಾಯದಿಂದ, ವೇಗದ ರೋಬೊಟಿಕ್ ಕಾಂಪ್ಲೆಕ್ಸ್ ಮಿಟಲ್ ವಾಲ್ಟ್ ಅನ್ನು ನಾವು ಜಾಗತಿಕ ಮಾನದಂಡಗಳಿಗೆ ವಿರುದ್ಧವಾಗಿ 70 ನಿಮಿಷಗಳಲ್ಲಿ ದುರಸ್ತಿ ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಂಬರುವ ದಿನಗಳಲ್ಲಿ ಇಂತಹ ಇನ್ನೂ ಹೆಚ್ಚಿನ ಮೈಲುಗಲ್ಲುಗಳನ್ನು ಸಾಧಿಸುವ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ' ಎಂದು ಹೇಳಿದ್ದಾರೆ.