ಕರ್ನಾಟಕ

karnataka

ETV Bharat / state

Karnataka Unlock 3.0: ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ - ಬೆಂಗಳೂರು ಅನ್​ಲಾಕ್

ಮೂರನೇ ಹಂತದ ಅನ್​ಲಾಕ್ ಹಿನ್ನೆಲೆ ಇಂದಿನಿಂದ ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ.

100% Occupancy in govt Office
ಪೂರ್ಣ ಪ್ರಮಾಣದಲ್ಲಿ ಕಾರ್ಯಾರಾಂಭ ಮಾಡಿದ ಸರ್ಕಾರಿ ಕಚೇರಿಗಳು

By

Published : Jul 5, 2021, 2:04 PM IST

ಬೆಂಗಳೂರು : ಮೂರನೇ ಹಂತದ ಅನ್​ಲಾಕ್ ಜಾರಿಯಾದ ಹಿನ್ನೆಲೆ ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಕಳೆದ ಎರಡೂವರೆ ತಿಂಗಳು ಅಗತ್ಯ ಸೇವೆ ಒದಗಿಸುವ 13 ಇಲಾಖೆಗಳು ಹೊರತುಪಡಿಸಿ, ಉಳಿದ ಇಲಾಖೆಗಳು ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ರೊಟೇಷನ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇಂದಿನಿಂದ ಸಂಪೂರ್ಣವಾಗಿ ಕಚೇರಿಗಳು ಪುನಾರಂಭಗೊಂಡಿವೆ.

ಪೂರ್ಣ ಪ್ರಮಾಣದಲ್ಲಿ ಕಾರ್ಯಾರಾಂಭ ಮಾಡಿದ ಸರ್ಕಾರಿ ಕಚೇರಿಗಳು

ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ಸೇರಿದಂತೆ ಬೆಂಗಳೂರಿನ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಬಹುತೇಕ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಓದಿ : ಬಾಗಿಲು ತೆರದವು ದಕ್ಷಿಣ ಕನ್ನಡದ ದೇವಾಲಯಗಳು : ದೇವರ ದರ್ಶನ ಪಡೆದು ಪುನೀತರಾದ ಜನ

ಸರ್ಕಾರಿ ಕಚೇರಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕಡತ ವಿಲೇವಾರಿ, ಸಾರ್ವಜನಿಕ ಸೇವೆಗಳಿಗೆ ಅಡ್ಡಿಯಾಗಿತ್ತು. ಇಂದಿನಿಂದ ಸಂಪೂರ್ಣವಾಗಿ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೆಲಸ ಕಾರ್ಯಗಳು ನಡೆಯಲಿವೆ.

ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಇಷ್ಟು ದಿನ ಬಣಗುಡುತ್ತಿದ್ದ ಶಕ್ತಿಸೌಧದ ಕಾರಿಡಾರ್ ಇಂದು ಮತ್ತೆ ಕಳೆಗಟ್ಟಿದೆ.

ABOUT THE AUTHOR

...view details