ಹೊಸಕೋಟೆ: ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಯಲ್ಲಿ ಶತಾಯುಷಿಗಳು ಮತ ಚಲಾಯಿಸುವ ಮೂಲಕ ಯುವಕರನ್ನು ನಾಚುವಂತೆ ಮಾಡಿದರು.
ಹೊಸಕೋಟೆ ಕ್ಷೇತ್ರದಲ್ಲಿ ಮತದಾನ ಮಾಡಿದ ಶತಾಯುಷಿ ಮತದಾರರು - ಹೊಸ ಕೋಟೆ ಉಪಚುನಾವಣೆ
ಹೊಸಕೋಟೆ ಉಪಚುನಾವಣೆಯಲ್ಲಿ 100 ವರ್ಷ ದಾಟಿದ ವೃದ್ಧರು ಮತದಾನ ಮಾಡಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
100 aged persons vote
ತಾಲೂಕಿನ ಇಟ್ಟಸಂದ್ರ ಗ್ರಾಮದ ಮುನಿಅಕ್ಕಯಮ್ಮ (101) ರವರು ಇಟ್ಟಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ತಮ್ಮ ಅಮೂಲ್ಯ ಮತ ಚಲಾಯಿಸಿದರು. ಬೆಂಡಿಗಾನಹಳ್ಳಿ ಗ್ರಾಮದ ರಾಮಕ್ಕ (106) ಬೆಂಡಿಗಾನಹಳ್ಳಿ ಮತಗಟ್ಟೆ ಕೇಂದ್ರದಲ್ಲಿ, ಸೂಲಿಬೆಲೆ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಸೂ.ರಂ.ರಾಮಯ್ಯ (101) ಸೂಲಿಬೆಲೆಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.