ಬೆಂಗಳೂರು:ಟೆರೆಸ್ ಮುಂದೆ ಮಕ್ಕಳು ಆಟವಾಡುವ ಪೋಷಕರು ಎಚ್ಚರವಾಗಿರಬೇಕು. ಸ್ವಲ್ಪ ಯಾಮಾರಿದರೂ ನಿಮ್ಮ ಮಕ್ಕಳ ಪ್ರಾಣಕ್ಕೆ ಕುತ್ತಾಗಬಹುದು. ಹೀಗೆ ಆಟವಾಡುತ್ತಿದ್ದ 10 ವರ್ಷದ ಬಾಲಕ ಆಯತಪ್ಪಿ ಕೆಳಗೆ ಬಿದ್ದು, ಸಾವನಪ್ಪಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. 10 ವರ್ಷದ ಬಾಲಕ ಗಗನ್ ಸಾವನ್ನಪ್ಪಿದವ. ನಿನ್ನೆ ಸಂಜೆ ಅಪಾರ್ಟ್ಮೆಂಟ್ನ ಟೆರೆಸ್ನಲ್ಲಿ ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ 5ನೇ ಮಹಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.