ಬೆಂಗಳೂರು: ಅಪ್ರಾಪ್ತೆಗೆ ಬೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಬನಶಂಕರಿಯ ಇಟ್ಟಮಡುವು ನಿವಾಸಿ ಬಾಬು ಅಲಿಯಾಸ್ ಚಿಟ್ಟಿ ಬಾಬು ಶಿಕ್ಷೆಗೊಳಗಾದ ಆರೋಪಿ.
ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದ ಆರೋಪಿ 2018ರಲ್ಲಿ 17 ವರ್ಷದ ಬಾಲಕಿಗೆ 'ನಿಮ್ಮ ಮನೆಯವರನ್ನು ಕೊಲ್ಲುತ್ತೇನೆಂದು' ಬೆದರಿಸಿ ಅತ್ಯಾಚಾರವೆಸಗಿದ್ದ. ಘಟನೆಯ ಸಂಬಂಧ 2018ರಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.