ಬೆಂಗಳೂರು: ಹೋಂ ಕ್ವಾರಂಟೈನ್ನಲ್ಲಿದ್ದ 10 ಜನ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ 10 ಮಂದಿ ನಾಪತ್ತೆ - 10 of the Home Quarantine in Bengaluru were lost
ಬೆಂಗಳೂರಿನಲ್ಲಿ 14 ದಿನ ಹೋಂ ಕ್ವಾರಂಟೈನ್ನಲ್ಲಿದ್ದ ಹತ್ತು ಜನ ರಾತ್ರೋರಾತ್ರಿ ನಾಪತ್ತೆ ಆಗಿದ್ದಾರೆ.
![ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ 10 ಮಂದಿ ನಾಪತ್ತೆ 10 of the Home Quarantine in Bengaluru were lost](https://etvbharatimages.akamaized.net/etvbharat/prod-images/768-512-6596193-833-6596193-1585566513417.jpg)
ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ 10 ಮಂದಿ ನಾಪತ್ತೆ
ಕಲಬುರಗಿ ಜಿಲ್ಲೆಯ ಗುರುಮಿಠಕಲ್ನ ಗೋಪ್ಲಾಪುರದ 10 ಮಂದಿಯನ್ನ ಬೆಂಗಳೂರಿನಲ್ಲಿ 14 ದಿನ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಆದರೆ ಹತ್ತು ಜನ ರಾತ್ರೋರಾತ್ರಿ ನಾಪತ್ತೆ ಆಗಿ ಊರು ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಷಯ ತಿಳಿದ ಬಿಬಿಎಂಪಿ ಹಾಗೂ ಅಧಿಕಾರಿಗಳು ಅವರಿದ್ದ ಜಾಗಕ್ಕೆ ತೆರಳಿದಾಗ ವಿಚಾರ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಹಾಗೂ ಪೊಲೀಸರು ಪರಾರಿಯಾಗಿದ್ದ 10 ಜನರನ್ನ ಪತ್ತೆ ಮಾಡಿ ಅವರ ವಿರುದ್ಧ ಕೇಸ್ ದಾಖಲಿಸಿ, ವಶಕ್ಕೆ ಪಡೆದಿದ್ದಾರೆ.